ಬೆಂಗಳೂರು: ಶಾಲಾ ಶುಲ್ಕ ಪಾವತಿಸದಿದ್ದರೆ ಡಿಸೆಂಬರ್ 1 ರಿಂದ ಆನ್ಲೈನ್ ತರಗತಿ ಬಂದ್ ಮಾಡಲು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ತೀರ್ಮಾನಿಸಿದೆ.
ನವೆಂಬರ್ 30 ರೊಳಗೆ ಶಾಲೆ ಶುಲ್ಕ ಪಾವತಿಸಲು ಪೋಷಕರಿಗೆ ಗಡುವು ನೀಡಲಾಗಿದೆ. ಜೂನ್ ನಿಂದಲೇ ಆನ್ಲೈನ್ ಕ್ಲಾಸ್ ಶುರುವಾಗಿದ್ದರೂ ಕೂಡ ಶೇಕಡ 50 ರಷ್ಟು ಮಕ್ಕಳು ಇದುವರೆಗೆ ದಾಖಲಾಗಿಲ್ಲ. ಶುಲ್ಕ ಪಾವತಿಸದೆ ಇದ್ದರೂ ಕೂಡ ಆನ್ಲೈನ್ ಶಿಕ್ಷಣ ನಿಲ್ಲಿಸಬಾರದು ಎಂದು ಸರ್ಕಾರ ಹೇಳಿದೆ.
ಆದರೆ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಪಟ್ಟು ಬಿಗಿಗೊಳಿಸಿದ್ದು, ಶುಲ್ಕ ಪಾವತಿಗೆ ನವಂಬರ್ 30 ರ ಗಡುವು ನೀಡಿವೆ. ಇಲ್ಲದಿದ್ದರೆ ಡಿಸೆಂಬರ್ 1 ರಿಂದ ಆನ್ಲೈನ್ ತರಗತಿ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ, ಕಟ್ಟಡಗಳ ಬಾಡಿಗೆ, ವಿದ್ಯುತ್, ನೀರಿನ ಬಿಲ್ ಸೇರಿದಂತೆ ನಿರ್ವಹಣೆ ಖರ್ಚು, ವೆಚ್ಚಗಳನ್ನು ಆಡಳಿತ ಮಂಡಳಿಗಳು ಪಾವತಿಸಬೇಕಿದೆ. ಪೋಷಕರು ಶುಲ್ಕ ಪಾವತಿಸದಿದ್ದರೆ ತರಗತಿ ನಡೆಸಲು ಕಷ್ಟವಾಗುತ್ತದೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ತಿಳಿಸಿದೆ.