ಸಾಮಾನ್ಯವಾಗಿ ಮಗು, ತಾಯಿ ಹಾಗೂ ಇತರರ ಮುಖ ನೋಡಿ ಪ್ರತಿಕ್ರಿಯೆ ನೀಡುತ್ತೆ. ಆದರೆ ಆಟಿಸಂನಿಂದ ಬಳಲುವ ಮಕ್ಕಳು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.
ಆಟಿಸಂನಿಂದ ಬಳಲುವ ಮಕ್ಕಳು ಮಾತು ಕೇಳಿಯೂ ಪ್ರತಿಕ್ರಿಯೆ ನೀಡುವುದಿಲ್ಲ. ರೋಗದಿಂದ ಬಳಲುವ ಮಕ್ಕಳು ಬೇರೆಯವರ ಜೊತೆ ಬೆರೆಯುವುದು ಕಡಿಮೆ. ಅಲ್ಲದೆ ಇದು ಭಯದ ರೂಪದಲ್ಲಿ ಹೊರ ಬರುತ್ತಿರುತ್ತದೆ.
ಒಬ್ಬಂಟಿಯಾಗಿರಲು ಇಚ್ಛಿಸುವ ಮಕ್ಕಳು, ಒಂದೇ ವಸ್ತುವಿನ ಮೇಲೆ ಲಕ್ಷ್ಯ ಇಟ್ಟಿರುತ್ತಾರೆ. ಅವರ ಚಿಂತನೆ ಅಭಿವೃದ್ಧಿಯಾಗದಿರುವ ಕಾರಣ ಅವರು ಸೃಜನಶೀಲರಾಗಿರುವುದಿಲ್ಲ.
ಒಂಭತ್ತು ತಿಂಗಳಾದರೂ ನಿಮ್ಮ ಮಗು ನಗುತ್ತಿಲ್ಲ, ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದಾದರೆ ಎಚ್ಚರ. ಇದು ಆಟಿಸಂ ಲಕ್ಷಣ.