![](https://kannadadunia.com/wp-content/uploads/2023/05/application-web-780x405-1-1.jpg)
ಬೆಂಗಳೂರು : 2024-25 ನೇ ಸಾಲಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮಾ, ಡಾ.ಬಿ.ಆರ್.ಅಂಬೇಡ್ಕರ, ಇಂದಿರಾ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಲ್ಲಿ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜನವರಿ 6, 2024 ರವರೆಗೆ ವಿಸ್ತರಿಸಲಾಗಿದೆ.
ಆಸಕ್ತರು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮಾ, ಡಾ.ಬಿ.ಆರ್.ಅಂಬೇಡ್ಕರ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿಸಲ್ಲಿಸಲು ಅಗತ್ಯ ದಾಖಲೆ: ಮಗುವಿನ ಇತ್ತೀಚಿನ ಭಾವಚಿತ್ರ, ಮಗುವಿನ ಎಸ್‍ಎಟಿಎಸ್ (SಂಖಿS) ನಂಬರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು ಹಾಗೂ ಪ.ಜಾತಿ ಪ.ಪಂಗಡ ಹೊರತುಪಡಿಸಿ ಉಳಿದ ವರ್ಗದವರು ಸಲ್ಲಿಸುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಕಡ್ಡಾಯವಾಗಿ ಪ್ರಸ್ತುತ ವರ್ಷದ್ದಿರಬೇಕು. ಮಗುವಿನ ಆಧಾರ ಕಾರ್ಡ ಝರಾಕ್ಸ್, ವಿಶೇಷ ಮೀಸಲಾತಿ ಕೋರುವ ಪ್ರಮಾಣ ಪತ್ರಗಳು, ಪಡಿತರ ಚೀಟಿಯ ಝರಾಕ್ಸ್ ಪತ್ರಿಯೊಂದಿಗೆ ಅರ್ಜಿಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0836-2447201 ಹಾಗೂ http:/kea.kar.nic.in http://kreis.kar.nic.in ಜಾಲತಾಣವನ್ನು ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕರು ತಿಳಿಸಿದ್ದಾರೆ.