![](https://kannadadunia.com/wp-content/uploads/2024/01/Health-Dep.jpg)
ಬೆಂಗಳೂರು : ಮಕ್ಕಳಲ್ಲಿ ಲಸಿಕಾನಂತರ ಕಂಡು ಬರುವ ಪ್ರತಿಕೂಲ ಅಡ್ಡಘಟನೆಗಳ (AEFI) ಉಚಿತ ನಿರ್ವಹಣೆ ಬಗ್ಗೆ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಲಸಿಕಾ ಕಾರ್ಯಕ್ರಮವು ಸರ್ಕಾರದ ಆರೋಗ್ಯ ಯೋಜನೆಗಳ ಪೈಕಿ ಮತ್ತು ಪುರೋಗಾಮಿ ಹಲವು ಯೋಜನೆಯಾಗಿರುತ್ತದೆ.ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯದ ಮೇಲೆ ಲಸಿಕಾ ಕಾರ್ಯಕ್ರಮವು ಪೂರಕ ಪರಿಣಾಮವನ್ನು ಹೊಂದಿದ್ದು ಸಾರ್ವತ್ರಿಕವಾಗಿ ಬೇಡಿಕೆಯ ಕಾರ್ಯಕ್ರಮವಾಗಿರುತ್ತದೆ. ಸರ್ಕಾರವು ಲಸಿಕೆ ಪಡೆಯುವ ಮಕ್ಕಳ ಸುರಕ್ಷತೆಗಾಗಿ ಹಲವಾರು ಉತ್ತಮ ಗುಣಾತ್ಮಕ ಕ್ರಮಗಳನ್ನು ಅನುಸರಣಾ ಪಟ್ಟಿಯಂತೆ ಕೈಗೊಳ್ಳುತ್ತಲಿದೆ.
ಆದಾಗ್ಯೂ ಸಹ ಕೆಲವು ಸಂದರ್ಭಗಳಲ್ಲಿ ಮಕ್ಕಳಲ್ಲಿ ಪ್ರತಿಕೂಲ/ಅಡ್ಡ ಘಟನೆಗಳು ಕಂಡುಬರುತ್ತವೆ. ಸದರಿ ಘಟನೆಗಳು ಲಸಿಕಾಂತರಿಕ ಅಥವಾ ಬಾಹ್ಯ ಕಾರಣಗಳಿಂದ ಆಗಿದ್ದಿರಬಹುದಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಮಗುವಿಗೆ ಕೂಡಲೇ ಸೂಕ್ತ ಚಿಕಿತ್ಸೆ ನೀಡಿ ಪುನಃಶ್ವೇತನ ಗೊಳಿಸುವ ಜವಾಬ್ದಾರಿ, ಸಾರ್ವಜನಿಕವಾಗಿ ಸರ್ಕಾರಿ ಮತ್ತು ನೋಂದಾಯಿತ ಖಾಸಗಿ ವೈದ್ಯಕೀಯ ವ್ಯವಸ್ಥೆಯದ್ದಾಗಿರುತ್ತದೆ.
ಆದುದರಿಂದ ಯಾವುದೇ ಸಂದರ್ಭದಲ್ಲಿ ಲಸಿಕಾ ನಂತರ ಕಂಡುಬರುವ ಅಡ್ಡ ಘಟನೆಗಳ ಸಂದರ್ಭಗಳನ್ನು ತೀವ್ರವಾಗಿ ಪರಿಗಣಿಸಿ, ಅಡ್ಡ ಘಟನೆಗೆ ತುತ್ತಾಗಿರುವ ಮಗುವನ್ನು ಆದ್ಯತೆ ಮೇಲೆ ಒಳರೋಗಿಯಾಗಿ ದಾಖಲಿಸಿಕೊಂಡು, ಉಚಿತ ಚಿಕಿತ್ಸೆಯನ್ನು ನೀಡಿ ಪುನಃಕ್ಷೇತನಗೊಳಿಸಬೇಕು. ಈ ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆ ಲಭ್ಯವಿರುವ ಅನೇಕ ಆಯ್ಕೆಗಳ ಪೈಕಿ AB-PMIAY-CM’sArk ಸಹ ಒಂದಾಗಿರುತ್ತದೆ.
ಲಸಿಕಾನಂತರ ಮಕ್ಕಳಲ್ಲಿ ಕಂಡುಬರುವ 19 ತೀವ್ರ ಮತ್ತು ಗಂಭೀರ ಅಡ್ಡಘಟನೆಗಳಲ್ಲಿ 10 ಘಟನೆಗಳ ಚಿಕಿತ್ಸೆಗೆ AB-PMJAY-CMS Ark ಯೋಜನೆಯಡಿಯಲ್ಲಿ ನೇರವಾಗಿ ಪ್ಯಾಕೇಜ್‌ಗಳು ಲಭ್ಯವಿರುತ್ತವೆ. ಉಳಿದ 9 ಘಟನೆಗಳಿಗೆ 9 ಸನಿಹದ ಚಿಕಿತ್ಸಾ ಪ್ಯಾಕೇಜ್‌ಗಳನ್ನು ಬಳಸಬಹುದಾಗಿರುತ್ತದೆ (ಅನುಬಂಧ 1 ಮತ್ತು 2 ರಂತೆ). ಎಂಬ ಮಾಹಿತಿಯನ್ನು ಒದಗಿಸುತ್ತಾ ರಾಜ್ಯದಲ್ಲಿರುವ ಎಲ್ಲಾ AB- PMJAY-CM’sArK ನೋಂದಾಯಿತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಲಸಿಕಾನಂತರ ಮಕ್ಕಳಲ್ಲಿ ಕಂಡುಬರುವ ಅಡ್ಡಘಟನೆಗಳಿಗೆ ಪರಿಣಾಮಕಾರಿ ಮತ್ತು ಯಶಸ್ವಿಯಾಗಿ ಚಿಕಿತ್ಸೆ ನೀಡಲು ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಿದೆ. ನಷ್ಟ ಪರಿಹಾರವು AB-PMJAY-CM’sArK ಕಾರ್ಯಕ್ರಮ ವ್ಯಾಪ್ತಿಗೆ ಬರುವುದಿಲ್ಲ.
![](https://kannadadunia.com/wp-content/uploads/2024/01/WhatsApp-Image-2024-01-05-at-11.40.15-PM.jpeg)
![](https://kannadadunia.com/wp-content/uploads/2024/01/WhatsApp-Image-2024-01-05-at-11.40.15-PM-1.jpeg)