alex Certify ಯಜಮಾನಿಯರೇ ಗಮನಿಸಿ : ʻಗೃಹಲಕ್ಷ್ಮಿʼ 5 ನೇ ಕಂತಿನ ಹಣ ಬಂತಾ? ಜಸ್ಟ್‌ ಈ ರೀತಿ ಸ್ಟೇಟಸ್‌ ಚೆಕ್‌ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಜಮಾನಿಯರೇ ಗಮನಿಸಿ : ʻಗೃಹಲಕ್ಷ್ಮಿʼ 5 ನೇ ಕಂತಿನ ಹಣ ಬಂತಾ? ಜಸ್ಟ್‌ ಈ ರೀತಿ ಸ್ಟೇಟಸ್‌ ಚೆಕ್‌ ಮಾಡಿ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಮಹಿಳೆಯರಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ ಐದನೇ ನೇ ಕಂತಿನ ಹಣ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗಿದೆ.

ಪಡಿತರ ಚೀಟಿ ಹೊಂದಿದ ‘ಕುಟುಂಬದ ಯಜಮಾನಿ’ ಎಂದು ಗುರುತಿಸಲ್ಪಟ್ಟ ಮಹಿಳೆಯರಿಗೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಆಗಸ್ಟ್ – 2023 ರಿಂದ ಮಾಹೆಯಾನ 2000 ರೂ.ಗಳನ್ನು ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ.

ಗೃಹಲಕ್ಷ್ಮಿ’ ಹಣ ಬಂದಿದೆಯಾ ಅಂತ ಈ ರೀತಿ ಸ್ಟೇಟಸ್ ಚೆಕ್ ಮಾಡಿ

ಮೊದಲು ನೀವು ಪ್ಲೇ ಸ್ಟೋರ್ ಗೆ ಹೋಗಿ DBT ಕರ್ನಾಟಕ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ

ಈ ಆಪ್ ಅನ್ನು ಓಪನ್ ಮಾಡಿದ ತಕ್ಷಣ ನಿಮಗೆ ಕೆಲವು ಪರ್ಮಿಷನ್ ಗಳನ್ನು ಕೇಳಲಾಗುತ್ತದೆ ನೀವು ಅದಕ್ಕೆ allow ಎಂದು ಕ್ಲಿಕ್ ಮಾಡಬೇಕು.

ನೀವು ಯಾರ ಸ್ಟೇಟಸ್ ಚೆಕ್ ಮಾಡುತ್ತಿದ್ದೀರಾ ಅವರ ಆಧಾರ್ ಕಾರ್ಡ್ ಎಂಟ್ರಿ ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಹೋಗುತ್ತದೆ ಆ OTP ಯನ್ನು ಎಂಟ್ರಿ ಮಾಡಿ.

mPIN ಕ್ರಿಯೇಟ್ ಮಾಡಲು ಕೇಳಿದಾಗ, ನೀವು ನಾಲ್ಕು ಸಂಖ್ಯೆಗಳನ್ನು ಸೆಕ್ಯೂರಿಟಿ ಕೋಡ್ ಆಗಿ ಸೆಲೆಕ್ಟ್ ಮಾಡಿ ನಮೂದಿಸಿ ಮತ್ತೊಮ್ಮೆ ಅದನ್ನು ಹಾಕುವ ಮೂಲಕ ಕನ್ಫರ್ಮ್ ಮಾಡಿ.

ನೀವು ಯಾವ ಫಲಾನುಭವಿಗೆ ವಿವರವನ್ನು ಚೆಕ್ ಮಾಡುತ್ತಿದ್ದೀರಾ ಅವರ ಆಧಾರ್ ಕಾರ್ಡ್ ಡೀಟೇಲ್ಸ್ ಸ್ಕ್ರೀನ್ ಮೇಲೆ ಬರುತ್ತದೆ.ನಂತರ ಮುಂದೆ ಬರುವ ಸೂಚನೆಗಳನ್ನು ಗಮನಿಸಿ ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ ಓಕೆ ಕೊಡಿ.

ನಂತರ ಅದರಲ್ಲಿ ಪೇಮೆಂಟ್ ಸ್ಟೇಟಸ್ ಎನ್ನುವ ಆಪ್ಷನ್ ಬರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಸರ್ಕಾರದ ಯಾವ ಯೋಜನೆಗಳಿಂದ DBT ಮೂಲಕ ಹಣ ವರ್ಗಾವಣೆ ಆಗಿದೆ ಎನ್ನುವ ಸಂಪೂರ್ಣ ವಿವರ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...