ಕೊರೊನಾದಿಂದಾಗಿ ಮಕ್ಕಳಿಗೆ ಆನ್ಲೈನ್ ನಲ್ಲಿ ಶಿಕ್ಷಣ ನಡೆಯುತ್ತಿದೆ. ಆನ್ಲೈನ್ ಕ್ಲಾಸಿನ ಕಾರಣಕ್ಕೆ ಮಕ್ಕಳು ಸದಾ ಕೈನಲ್ಲಿ ಮೊಬೈಲ್ ಹಿಡಿದು ಕುಳಿತಿರುತ್ತಾರೆ. ಆದ್ರೆ ಈ ಮೊಬೈಲ್ ಮಕ್ಕಳ ದಾರಿ ತಪ್ಪಿಸುತ್ತಿದೆ. ಮೊಬೈಲ್ ಹೆಚ್ಚು ದುರುಪಯೋಗವಾಗ್ತಿದೆ. ಗುಜರಾತಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
15 ವರ್ಷದ ಬಾಲಕಿಗೆ ಆನ್ಲೈನ್ ಶಾಲೆ ನಡೆಯುತ್ತಿತ್ತು. ಪಾಲಕರು, ಮಗಳಿಗಾಗಿ ಮೊಬೈಲ್ ಕೊಡಿಸಿದ್ದಾರೆ. ಆಕೆ ಶಾಂತವಾಗಿ ಪಾಠ ಕೇಳಲಿ ಎನ್ನುವ ಕಾರಣಕ್ಕೆ ಪ್ರತ್ಯೇಕ ರೂಮ್ ವ್ಯವಸ್ಥೆ ಮಾಡಿದ್ದಾರೆ. ಪಾಠ ಕೇಳುವ ಬದಲು ಬಾಲಕಿ ದಾರಿ ತಪ್ಪಿದ್ದಾಳೆ. ನ್ಯೂಡ್ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾಳೆ. ಈ ವಿಷ್ಯ ಪಾಲಕರಿಗ ಗೊತ್ತಾಗ್ತಿದ್ದಂತೆ ಪಾಲಕರು ದಂಗಾಗಿದ್ದಾರೆ.
ಬಾಲಕಿ ತನ್ನ ಖಾಸಗಿ ಅಂಗದ ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಅಷ್ಟೆ ಅಲ್ಲ ತನ್ನ ಸೋದರ ಸಂಬಂಧಿಗೆ ಫೋಟೋ ಹಾಕುವಂತೆ ಒತ್ತಾಯ ಮಾಡಿದ್ದಾಳೆ. ಮಗಳ ವರ್ತನೆಯಿಂದ ಹೃದಯಾಘಾತಕ್ಕೊಳಗಾಗಿದ್ದ ಪಾಲಕರು ಈಗ ಚೇತರಿಸಿಕೊಂಡಿದ್ದಾರೆ. ಆದ್ರೆ ಮಗಳು ಮಾತ್ರ ತನ್ನ ವರ್ತನೆ ಬಿಡಲಿಲ್ಲ. ಹಾಗಾಗಿ ಪಾಲಕರು ಸಹಾಯವಾಣಿಗೆ ಕರೆ ಮಾಡಿ, ನೆರವು ಕೇಳಿದ್ದಾರೆ. ತಜ್ಞರ ಸಲಹೆ ನಂತ್ರ ಪಾಲಕರ ಮುಂದೆ ಮಾತ್ರ ಫೋನ್ ಬಳಸುವುದಾಗಿ ಹೇಳಿದ್ದಾಳೆ ಎನ್ನಲಾಗಿದೆ.