alex Certify ಪದೇ ಪದೇ ಟಿ.ವಿ.ನೋಡುತ್ತಿದ್ದ ಮಗನಿಗೆ ಹೀಗೊಂದು ಪಾಠ ಕಲಿಸಿದ ಅಪ್ಪ-ಅಮ್ಮ….! ಭೇಷ್​ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಟಿ.ವಿ.ನೋಡುತ್ತಿದ್ದ ಮಗನಿಗೆ ಹೀಗೊಂದು ಪಾಠ ಕಲಿಸಿದ ಅಪ್ಪ-ಅಮ್ಮ….! ಭೇಷ್​ ಎಂದ ನೆಟ್ಟಿಗರು

ಚೀನಾ: ಮಕ್ಕಳು ತಪ್ಪು ಮಾಡಿದಾಗ ಪೋಷಕರ ತಮ್ಮದೇ ಆದ ಶೈಲಿಗಳು ಮತ್ತು ವಿಧಾನಗಳಲ್ಲಿ ಶಿಕ್ಷಿಸುತ್ತಾರೆ. ಮಕ್ಕಳು ಪದೇ ಪದೇ ಮೊಬೈಲ್​ ನೋಡುವುದು, ಟಿ.ವಿ. ನೋಡುವುದು ಮಾಡಿದಾಗಲೂ ಶಿಕ್ಷೆಗಳು ಮಾಮೂಲಿ. ಆದರೆ ಎಷ್ಟೇ ಶಿಕ್ಷೆ ಕೊಟ್ಟರೂ ಮಕ್ಕಳು ಮಕ್ಕಳೇ. ಮಾರನೆಯ ದಿನ ಮತ್ತದೇ ಚಾಳಿ. ಟಿ.ವಿ.ಯ ದಾಸನಾಗಿರುವ ಮಗನಿಗೆ ಈ ಅಮ್ಮ ನೀಡಿರುವ ಶಿಕ್ಷೆ ಮಾತ್ರ ಇದೀಗ ಭಾರಿ ವೈರಲ್​ ಆಗಿದೆ.

ಮಧ್ಯ ಚೀನಾದ ಹುನಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ತಮ್ಮ ಎಂಟು ವರ್ಷದ ಮಗ ಪದೇ ಪದೇ ಟಿ.ವಿ.ನೋಡುತ್ತಾನೆ ಎನ್ನುವ ಕಾರಣಕ್ಕೆ ಬೇರೆಲ್ಲಾ ಶಿಕ್ಷೆ ಕೊಟ್ಟು ಸುಸ್ತಾಗಿದ್ದ ಈ ಅಮ್ಮ, ಇದೀಗ ವಿಚಿತ್ರ ಶಿಕ್ಷೆ ಕೊಟ್ಟಿದ್ದಾಳೆ. ಮತ್ತೆ ಟಿ.ವಿ ನೋಡುವ ಸಾಹಸವನ್ನೂ ಈ ಬಾಲಕ ಮಾಡುವುದಿಲ್ಲ.

ಅಷ್ಟಕ್ಕೂ ಭಾರಿ ಗಂಭೀರ ಹಾಗೂ ಅಮಾನವೀಯವಾದ ಶಿಕ್ಷೆಯನ್ನು ಅಮ್ಮ ಕೊಟ್ಟಿಲ್ಲ. ಬದಲಿಗೆ ಮಗನಿಗೆ ರಾತ್ರಿಯಿಡೀ ಮಲಗಲು ಬಿಡದೇ ಟಿ.ವಿ. ನೋಡಿಸಿದ್ದಾಳೆ! ಕೆಲಸಕ್ಕೆ ಹೋಗಿದ್ದ ದಂಪತಿ ಮನೆಗೆ ಬಂದಾಗಲೂ ಮಗ ಟಿ.ವಿ. ನೋಡುತ್ತಿದ್ದುದರಿಂದ ಸಿಟ್ಟಿಗೆದ್ದು ಈ ಕೆಲಸ ಮಾಡಿದ್ದಾರೆ. ಹೋಂ ವರ್ಕ್​, ಸ್ನಾನ, ತಿಂಡಿ ಏನೂ ಮಾಡದ ಮಗ ಟಿ.ವಿ. ನೋಡುತ್ತಿದ್ದುದಕ್ಕೆ ಸಿಟ್ಟಿನಿಂದ ಈ ಶಿಕ್ಷೆ ಕೊಟ್ಟಿದ್ದು, ಮಲಗಲು ಬಿಡಲಿಲ್ಲ. ಇದರಿಂದ ತಮ್ಮ ಮಗ ಇನ್ನೆಂದೂ ಟಿ.ವಿ. ಅಧಿಕ ನೋಡುವ ಸಾಹಸ ಮಾಡಲಾರ ಎಂದಿದ್ದಾರೆ.

ಇದು ತೀರಾ ಒಳ್ಳೆಯ ಐಡಿಯಾ ಎಂದು ಹಲವು ಪಾಲಕರು ಕಮೆಂಟ್​ ಮಾಡಿ ತಿಳಿಸುತ್ತಿದ್ದಾರೆ.

https://www.youtube.com/watch?v=OsxO66WX7ec

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...