ಬೆಂಗಳೂರು: ಕೊರೊನಾದಿಂದ ತಂದೆ-ತಾಯಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು 3500 ರೂಪಾಯಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಮಕ್ಕಳ ಪಾಲನೆ, ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಯೋಜನೆ ಮಾಹಿತಿ:
ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 3500 ರೂ. ಸಹಾಯಧನ ನೀಡಲಾಗುವುದು
ಪೋಷಕರಿಲ್ಲದ ಮಕ್ಕಳಿಗೆ ನೋಂದಾಯಿತ ಪಾಲನ ಸಮಿತಿ ಆಶ್ರಯ
ಗುಣಮಟ್ಟದ ಶಿಕ್ಷಣಕ್ಕೆ ವಸತಿ ಶಾಲೆಗಳಿಗೆ ಸೇರ್ಪಡೆ
10 ನೇ ತರಗತಿ ಪೂರೈಸಿದವರಿಗೆ ಲ್ಯಾಪ್ ಟಾಪ್, ಟ್ಯಾಬ್
21 ವರ್ಷವಾದ ಹೆಣ್ಣುಮಕ್ಕಳಿಗೆ 1 ಲಕ್ಷ ರೂ. ಸಹಾಯಧನ –ಉನ್ನತ ಶಿಕ್ಷಣ, ಮದುವೆಗೆ ನೆರವು
ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡವರ ಮಕ್ಕಳಿಗೆ ಹಿತೈಷಿ ನೇಮಿಸಿ ಸಬಲೀಕರಣಕ್ಕೆ ಕ್ರಮ.