ಕೆಲವು ವಾರಗಳಲ್ಲಿ, ನ್ಯುಮೋನಿಯಾದಂತಹ ನಿಗೂಢ ಕಾಯಿಲೆ ಚೀನಾದಲ್ಲಿ ವೇಗವಾಗಿ ಹರಡುತ್ತಿದೆ . ಕರೋನಾ ನಂತರ, ಚೀನಾದಲ್ಲಿ ಹರಡುತ್ತಿರುವ ಈ ರೋಗವು ವಿಶ್ವದ ಕಳವಳವನ್ನು ಹೆಚ್ಚಿಸಿದೆ.
ಶ್ವಾಸಕೋಶದ ಉರಿ ಸಮಸ್ಯೆ, ತೀವ್ರ ಪ್ರಮಾಣದ ಜ್ವರ, ಸಾಮಾನ್ಯ ಜ್ವರ, ಉಸಿರಾಟದ ತೊಂದರೆ ಇದರ ಲಕ್ಷಣಗಳಾಗಿದೆ. ಕಳೆದ ಕೆಲ ದಿನಗಳಲ್ಲಿ ಈ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದ್ದು, , ಆಸ್ಪತ್ರೆಗೆ ಮಕ್ಕಳ ದಾಖಲಾತಿ ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಹೆಚ್ಚಿದೆ.
ಮಕ್ಕಳನ್ನು ಕಾಡುತ್ತಿರುವ ನ್ಯುಮೋನಿಯಾದ ಲಕ್ಷಣಗಳು ಯಾವುವು? ತಿಳಿಯಿರಿ.
ನ್ಯುಮೋನಿಯಾದ ಲಕ್ಷಣಗಳು ಯಾವುವು
1) ಕೆಮ್ಮು ನ್ಯುಮೋನಿಯಾದ ಸಾಮಾನ್ಯ ಲಕ್ಷಣವಾಗಿದ್ದು, ಹೆಚ್ಚಾಗಿ ಕಫ ಉತ್ಪತ್ತಿ ಆಗುತ್ತದೆ.
2) ಜ್ವರ ಮತ್ತು ನಡುಗುವ ಚಳಿ.
3) ಕಡಿಮೆ ಉಸಿರಾಡುವಿಕೆ, ಉಸಿರಾಟದಲ್ಲಿ ತೊಂದರೆ
4) ಲೋ ಎನರ್ಜಿ ಮತ್ತು ಫಾಟಿಗ್.
5) ನ್ಯುಮೋನಿಯಾ ಇರುವ ಕೆಲವು ಮಕ್ಕಳಿಗೆ ಎದೆನೋವು ಉಂಟಾಗಬಹುದು. ನೋವು ತೀಕ್ಷ್ಣವಾಗಿರಬಹುದು,
6) ಉಬ್ಬಸ, ಆಯಾಸ, ಹಸಿವಿನ ಕೊರತೆ ಮತ್ತು ವಾಂತಿ.
ಇದನ್ನು ತಡೆಗಟ್ಟುವುದು ಹೇಗೆ..?
ನ್ಯುಮೋನಿಯಾವನ್ನು ತಡೆಯಲು ನಿಮ್ಮ ಮಗುವಿನ ಕೈಗಳನ್ನು ಆಗಾಗ ತೊಳೆಯಿರಿ.
ನಿಮ್ಮ ಮಗುವನ್ನು ಅನಾರೋಗ್ಯದಿಂದ ದೂರವಿಡಿ. ನಿಮ್ಮ ಮಗುವಿನ ಸಮೀಪ ಧೂಮಪಾನ ಮಾಡಬೇಡಿ.