ಬೆಂಗಳೂರು : ಈಗಿನ ಮಕ್ಕಳಿಗೆ ಸ್ಮಾರ್ಟ್ಫೋನ್ ಕೈಯಲ್ಲಿ ಕೊಟ್ಟಿಲ್ಲವೆಂದರೆ ಊಟ ಸೇರೋದಿಲ್ಲ. ಹೌದು, ಚಿಕ್ಕವಯಸ್ಸಿಗೆ ಮಕ್ಕಳು ಸ್ಮಾರ್ಟ್ ಫೋನ್ ಗೆ ಹೆಚ್ಚು ಅಡಿಕ್ಟ್ ಆಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಕೈಗೆ ಸ್ಮಾರ್ಟ್ಫೋನ್ ಕೊಡುವ ಅಭ್ಯಾಸ ಮಾಡಿದರೆ ಮಕ್ಕಳ ಮೇಲೆ ಕೆಟ್ಟದಾದ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿನ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ವಿಚಿತ್ರ ಕಾಯಿಲೆ ತಗುಲುವ ಸಂಭವವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
‘ಟ್ರೆಮರ್ಸ್ ಡಿಸಾರ್ಡರ್’ ಎಂಬ ವಿಚಿತ್ರ ಕಾಯಿಲೆ ಇತ್ತೀಚೆಗೆ ಮಕ್ಕಳನ್ನು ಕಾಡುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಕಾಯಿಲೆಯಿಂದ ಮಕ್ಕಳಲ್ಲಿ ಕೈಗಳ ಸೆಳೆತ, ನರಗಳ ಎಳೆತ, ಕಣ್ಣಿನ ಸಮಸ್ಯೆ, ತಲೆನೋವು, ನಿದ್ದೆ ಇಲ್ಲದಿರುವುದು, ನಿಶ್ಯಕ್ತಿ ಸಮಸ್ಯೆ, 90 ರ ವೃದ್ದರಂತೆ ಮಕ್ಕಳ ಕೈ ಕಾಲು ನಡುಗುವುದು, ಮಕ್ಕಳು ಯಾರ ಜೊತೆ ಕೂಡ ಸೇರದೇ ಇರುವುದು ಟ್ರೆಮರ್ಸ್ ಡಿಸಾರ್ಡರ್ ಖಾಯಿಲೆಯ ಲಕ್ಷಣಗಳಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹದಿಹರೆಯದವರಲ್ಲಿ ಸ್ಮಾರ್ಟ್ಫೋನ್ಗಳ ಬಳಕೆಯು ಕಳೆದ 8 ವರ್ಷಗಳಲ್ಲಿ ಹೆಚ್ಚಾಗಿದೆ ಎಂದು ಪ್ಯೂ ಸಂಶೋಧನಾ ಸಮೀಕ್ಷೆಯು ಕಂಡುಹಿಡಿದಿದೆ. ಹಾಗಾಗಿ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಕೊಡುವ ಮೊದಲು ಜಾಗರೂಕರಾಗಿರಬೇಕು.
ಅಂದು ಲಗೋರಿ, ಕುಂಟಾ-ಬಿಲ್ಲೇ, ಮರಕೋತಿ, ಚಿನ್ನಿ ದಾಂಡು, ಚೌಕಾಮಣಿ, ಗದ್ದೆಯಲ್ಲಿ ಕ್ರಿಕೆಟ್, ವಾಲಿ ಬಾಲ್ ಆಡುತ್ತಿದ್ದ ಮಕ್ಕಳು ಈಗ ಗಂಟೆಗಟ್ಟಲೇ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಪಬ್ಜಿ ಗೇಮ್, ಟಿಕ್ಟಾಕ್, ಆತಂಕಕಾರಿ ಸಾಪ್ಟವೇರ್ಗಳು ಹಾಗೂ ಇನ್ನಿತರ ಅಶ್ಲೀಲ ವಿಚಾರಗಳು, ಭಯಾನಕ ವಿಡಿಯೋ ಮಕ್ಕಳ ಕೋಮಲವಾದ ಮನಸ್ಸನ್ನು ಕೆರಳಿಸಿ, ಪ್ರಚೋದಿಸಿ ಅವರನ್ನು ಗಮನ ಕೇಂದ್ರಿಸಿಕೊಂಡು ಕೊನೆಗೆ ಆತ್ಮಹತ್ಯೆ, ಗೆ ಪ್ರಚೋದಿಸುವ ಘಟನೆಗಳು ಸಂಭವಿಸುತ್ತಿರುವುದು ಆತಂಕಕಾರಿಯಾಗಿದೆ.