ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಒಳ್ಳೆಯದು, ಕೆಟ್ಟದ್ದನ್ನು ಕಲಿಸುವುದು ಸವಾಲಿನ ಕೆಲಸ. ಮೊಬೈಲ್, ಟಿವಿ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ವಯಸ್ಸಿಗಿಂತ ಹೆಚ್ಚಿನದನ್ನು ಕಲಿಯುವ ಮಕ್ಕಳು, ಪ್ರಯೋಗ ಶುರು ಮಾಡ್ತಾರೆ. ಪ್ರತಿ ಕ್ಷಣವೂ ಮಕ್ಕಳ ಮೇಲೆ ನಿಗಾಯಿಡುವುದು ಕಷ್ಟ. ತಾಯಿಯೊಬ್ಬಳು ತನ್ನ ಮಗ ಲ್ಯಾಪ್ ಟಾಪ್ ನಲ್ಲಿ ಕಂಡ ವಿಷ್ಯವನ್ನು ಎಲ್ಲರ ಮುಂದಿಟ್ಟಿದ್ದಾಳೆ.
ವರುಣನ ಅವಾಂತರಕ್ಕೆ ತತ್ತರಿಸಿದ ಅನ್ನದಾತ…..! ಮಕ್ಕಳ ಮದುವೆಗೂ ಹಣವಿಲ್ಲದೆ ಪರದಾಟ
ಅಮೆರಿಕಾದ ಮಹಿಳೆ ಮಗನ ವಯಸ್ಸು 14 ವರ್ಷ. ಮಗನಿಗೆ ಪ್ರತ್ಯೇಕ ಲ್ಯಾಪ್ ಟಾಪ್ ನೀಡಿಲ್ಲವಂತೆ. ಮಗನ ಮೇಲೆ ನಿಗಾ ಇಡಲು ಪಾಲಕರು ತಮ್ಮ ಲ್ಯಾಪ್ ಟಾಪ್ ಬಳಸುವಂತೆ ಹೇಳಿದ್ದಾರಂತೆ. ಒಂದು ದಿನ ಲ್ಯಾಪ್ ಟಾಪ್ ನಲ್ಲಿದ್ದ ಮಗನ ಪೋಲ್ಡರ್ ನೋಡಿದ್ದಾರೆ. ಅದ್ರಲ್ಲಿ ಒಂದು ಎಕ್ಸ್ ಎಲ್ ಶೀಟ್ ಸಿಕ್ಕಿದೆ. ಅದ್ರಲ್ಲಿದ್ದ ವಿಷ್ಯ ಪಾಲಕರ ತಲೆಬಿಸಿಗೆ ಕಾರಣವಾಗಿದೆ.
ಅದ್ರಲ್ಲಿ ಮಗ, ಆತನ ಕ್ಲಾಸ್ ನಲ್ಲಿರುವ ವಿದ್ಯಾರ್ಥಿಗಳ ಹೆಸರನ್ನು ಬರೆದಿದ್ದಾನಂತೆ. ಅದ್ರ ಮುಂದೆ ಅವರ ಸ್ವಭಾವ ಬರೆದಿದ್ದಾನಂತೆ. ಒಬ್ಬಾಕೆ ಹೆಸರ ಮುಂದೆ ಆಕೆ ತಾಯಿ ಪೊಲೀಸ್ ಎಂದು ಬರೆದಿದ್ದಾನಂತೆ. ಇನ್ನೊಬ್ಬನ ಹೆಸರ ಮುಂದೆ ಆತ, ಕೆಟ್ಟ ಜೋಕ್ ಮಾಡ್ತಾನೆ ಎಂದು ಬರೆದಿದ್ದಾನಂತೆ. ಹೀಗೆ ಎಲ್ಲ ವಿದ್ಯಾರ್ಥಿಗಳ ಸ್ವಭಾವದ ಲೀಸ್ಟ್ ಅಲ್ಲಿದೆ. ಇದನ್ನು ನೋಡಿದ ಪಾಲಕರು, ಯಾಕೆ ಹೀಗೆ ಮಾಡಿದ್ದೀಯಾ ಎಂದು ಪ್ರಶ್ನೆ ಕೇಳಿದ್ದಾರಂತೆ. ಆದ್ರೆ ಅದು ನನ್ನದಲ್ಲ ಎಂಬ ಉತ್ತರವನ್ನು ಆತ ನೀಡಿದ್ದಾನೆ.
6 ತಿಂಗಳಿನಿಂದ ಹೊಟ್ಟೆಯಲ್ಲಿತ್ತು ಮೊಬೈಲ್……! ಎಕ್ಸ್ ರೇ ನೋಡಿ ವೈದ್ಯರು ಶಾಕ್
ಆತನ ಈ ಕೆಲಸ ಗೊಂದಲಕ್ಕೀಡು ಮಾಡಿದೆ. ಇದು ಸರಿಯಾ? ತಪ್ಪಾ ಎಂಬುದು ಗೊತ್ತಾಗ್ತಿಲ್ಲವೆಂದು ಮಹಿಳೆ ಹೇಳಿದ್ದಾಳೆ. ಆಕೆ ಈ ಪೋಸ್ಟ್ ಗೆ ತಜ್ಞರು ಪ್ರತಿಕ್ರಿಯೆ ನೀಡಿದ್ದಾರೆ. 14ನೇ ವಯಸ್ಸಿನಲ್ಲಿ ಸ್ವಭಾವವನ್ನು ಗಮನಿಸಿ ಪಟ್ಟಿ ಮಾಡುವುದು ಗಂಭೀರವಾದ ಸಮಸ್ಯೆ. ಮಗನನ್ನು ಸರಿಯಾಗಿ ವಿಚಾರಿಸುವ ಅಗತ್ಯವಿದೆ. ಒಂದು ವೇಳೆ ಆತ ಬಾಯಿ ಬಿಡದೆ ಹೋದಲ್ಲಿ ತಜ್ಞರ ಬಳಿ ಕರೆದೊಯ್ಯಿರಿ ಎಂದು ಸಲಹೆ ನೀಡಿದ್ದಾರೆ.