alex Certify ಹೊಸಬರಿಗೆ ಅವಕಾಶ ನೀಡಲು ಯಾವುದೇ ಕ್ಷಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಸಿದ್ದ: ಪರಮೇಶ್ವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸಬರಿಗೆ ಅವಕಾಶ ನೀಡಲು ಯಾವುದೇ ಕ್ಷಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಸಿದ್ದ: ಪರಮೇಶ್ವರ್

ಬೆಂಗಳೂರು: ಹೊಸಬರಿಗೆ ಅವಕಾಶ ಕಲ್ಪಿಸಲು ಸಚಿವ ಸ್ಥಾನ ಬಿಟ್ಟು ಕೊಡಬೇಕೆಂದು ಹೈಕಮಾಂಡ್ ಸೂಚನೆ ನೀಡಿದಲ್ಲಿ ಯಾವುದೇ ಕ್ಷಣದಲ್ಲಾದರೂ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಅವಕಾಶ ಸಿಗಬೇಕು ಎಂಬುದಕ್ಕೆ ನಮ್ಮ ಬೆಂಬಲ ಇದೆ. ಸಚಿವರನ್ನು ಇಲ್ಲಿನವರು ನಿರ್ಧರಿಸುವುದಿಲ್ಲ. ದೆಹಲಿಯವರೇ ನಿರ್ಧರಿಸುತ್ತಾರೆ. ಅಂತಹ ಸಂದರ್ಭ ಬಂದಲ್ಲಿ ಅಧಿಕಾರ ಬಿಟ್ಟು ಪಕ್ಷದ ಕೆಲಸ ನಿರ್ವಹಿಸುತ್ತೇನೆ ಎಂದು ತಿಳಿಸಿದ್ದಾರೆ.

ಎಲ್ಲರೂ ಸಚಿವರಾಗುವುದು ಒಳ್ಳೆಯದು, ಎಲ್ಲರಿಗೂ ಅವಕಾಶ ಸಿಗಬೇಕೆಂಬುದಕ್ಕೆ ನಮ್ಮ ಬೆಂಬಲ ಇದೆ. ಹೊಸಬರಿಗೆ ಅವಕಾಶ ನೀಡಲು ಸಚಿವ ಸ್ಥಾನ ಬಿಟ್ಟು ಕೊಡುವಂತೆ ಹೈಕಮಾಂಡ್ ಸೂಚನೆ ನೀಡಿದರೆ ನಾನು ಯಾವುದೇ ಕ್ಷಣ ರಾಜೀನಾಮೆ ನೀಡಲು ರೆಡಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...