ಜಪಾನಿನ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದು, ಆ ಬಳಿಕ ಅವರು ಭಾನುವಾರದಂದು ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಿದ್ದಾರೆ.
ಸೂರ್ಯಾಸ್ತದ ಬಳಿಕ ವಿದೇಶಿ ಗಣ್ಯರನ್ನು ಸ್ವಾಗತಿಸಬಾರದು ಎಂಬ ಶಿಷ್ಟಾಚಾರವನ್ನು ಬದಿಗೊತ್ತಿ ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಪುವಾ ನ್ಯೂಗಿನಿಯಾದ ಪ್ರಧಾನಿ ಜೇಮ್ಸ್ ಮರಾಪೆ ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಒಂದು ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ತಡೆಯೊಡ್ಡಲು ಮುಂದಾದರೂ ಸಹ ಜೇಮ್ಸ್ ಮರಾಪೆ ಹೃದಯಪೂರ್ವಕವಾಗಿ ನಮಿಸಿ ಆಶೀರ್ವಾದ ಪಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.