ಉತ್ಸಾಹವನ್ನು ಹೆಚ್ಚಿಸುವ ಮತ್ತು ಒಳ್ಳೆಯ ಭಾವನೆ ಮೂಡಿಸುವಂತಹ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣ ಸಿಗುತ್ತವೆ. ಹಾಸ್ಯದ ವಿಡಿಯೋಗಳಷ್ಟೇ ಮೋಟಿವೇಷನ್ ಸ್ಪೀಕರ್ಗಳ ಮಾತಿಗೂ ನೆಟ್ಟಿಗರು ಮಣೆ ಹಾಕುವುದುಂಟು.
ಈ ಬಾರಿ ಈ ಸರದಿಯಲ್ಲಿರುವವರು ನಟ ಪಂಕಜ್ ತ್ರಿಪಾಠಿ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡ ಕ್ಲಿಪ್ನಲ್ಲಿ, ನಟ ಪಂಕಜ್ ತ್ರಿಪಾಠಿ ಮಿಲಿಯನ್ ಡಾಲರ್ ಜೀವನ ಸಲಹೆಯನ್ನು ನೀಡುತ್ತಿರುವುದನ್ನು ಕಾಣಬಹುದು.
ಕಡಿಮೆ ಸವಲತ್ತುಗಳನ್ನು ಹೊಂದಿರುವಾಗ ಜನರು ಹೇಗೆ ಬಲಶಾಲಿಯಾಗುತ್ತಾರೆ ಎಂಬುದರ ಕುರಿತು ಪಂಕಜ್ ತ್ರಿಪಾಠಿ ಮಾತನಾಡಿದ್ದಾರೆ.
ನದಿಯ ಮೇಲೆ ಸೇತುವೆ ಇಲ್ಲದಿದ್ದರೆ, ಒಬ್ಬ ವ್ಯಕ್ತಿಯು ಈಜುವುದನ್ನು ಕಲಿಯುತ್ತಾನೆ ಎಂದು ನಾನು ಆಗಾಗ್ಗೆ ಹೇಳುತ್ತೇನೆ, ಆದ್ದರಿಂದ ಕಡಿಮೆ ಸೌಕರ್ಯಗಳು ಅಥವಾ ಸವಲತ್ತುಗಳನ್ನು ಹೊಂದಿರುವಾಗ ಯಾರೊಬ್ಬರು ನಿರಾಶೆಗೊಳ್ಳಬಾರದು. ಪರಿಸ್ಥಿತಿಯು ನಿಮ್ಮನ್ನು ಬಲಶಾಲಿ ಮತ್ತು ಉತ್ತಮ ಮನುಷ್ಯನನ್ನಾಗಿ ಮಾಡುತ್ತದೆ ಎಂದು ಅರ್ಥ ಎಂದು ತ್ರಿಪಾಠಿ ಹಿಂದಿಯಲ್ಲಿ ಹೇಳಿದ್ದಾರೆ.
ಇದು ಆಳವಾದ ಸಂದೇಶವಾಗಿದ್ದು, ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಪೋಸ್ಟ್ಗೆ ಶೀರ್ಷಿಕೆ ಇದೆ. ಜಾಲತಾಣದಲ್ಲಿ ಹಂಚಿಕೊಂಡ ನಂತರ ವೀಡಿಯೊ 256ಕೆ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ತ್ರಿಪಾಠಿ ಅವರ ಹೇಳಿಕೆಯನ್ನು ಮನಃಪೂರ್ವಕವಾಗಿ ಒಪ್ಪಿದ್ದಾರೆ ಮತ್ತು ಕಾಮೆಂಟ್ಗಳ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
https://twitter.com/aandy_sain/status/1572491787264208896?ref_src=twsrc%5Etfw%7Ctwcamp%5Etweetembed%7Ctwterm%5E1572491787264208896%7Ctwgr%5Ea0764a69ee667c5cd6b0f0ee88644ee90c834952%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpankaj-tripathi-gives-million-dollar-life-advice-in-viral-video-shared-by-ips-officer-your-dose-of-midweek-motivation-2002858-2022-09-21