ಬೀದಿ ಬದಿಯ ತಿಂಡಿ ತಿನ್ನುವವರಿಗೆ ಸದಾಕಾಲ ಇಷ್ಟವಾಗುವ ಆಹಾರ ಪಾನಿಪೂರಿ. ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಇದು ಫೇವರಿಟ್ ಫುಡ್ . ಇದಕ್ಕಾಗಿ ನೀವು ಎಷ್ಟು ಖರ್ಚು ಮಾಡುತ್ತೀರ ಎಂದ್ರೆ ಸುಮಾರು 10 ರೂ, 20, 30, 40 ಅಥವಾ ಗರಿಷ್ಠ ಅಂದ್ರೆ 100 ರೂ. ಎಂದು ಹೇಳಬಹುದು. ಆದರೆ ಮುಂಬೈ ವಿಮಾನ ನಿಲ್ದಾಣದಲ್ಲಿ 8 ಪೀಸ್ ನ ಗೋಲ್ಗಪ್ಪಾದ ಬೆಲೆ ಬರೋಬ್ಬರಿ 333 ರೂಪಾಯಿ !
ಶುಗರ್ ಕಾಸ್ಮೆಟಿಕ್ಸ್‌ನ ಸಹ-ಸಂಸ್ಥಾಪಕ ಮತ್ತು ಸಿಒಒ ಕೌಶಿಕ್ ಮುಖರ್ಜಿ ಅವರು ಭಾರತದ ಅತ್ಯಂತ ನೆಚ್ಚಿನ ತಿಂಡಿ ಪಾನಿಪೂರಿಯ ದುಬಾರಿ ಬೆಲೆ ನೋಡಿ ದಿಗ್ಭ್ರಮೆಗೊಂಡು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾನಿಪುರಿ, ದಹಿ ಪುರಿ ಮತ್ತು ಸೇವ್ ಪುರಿ 333 ರೂ.ಗೆ ಮಾರಾಟವಾಗುತ್ತಿರುವ ಚಿತ್ರವನ್ನು ಅವರು ಹಂಚಿಕೊಂಡು “CSIA ಮುಂಬೈ ವಿಮಾನ ನಿಲ್ದಾಣದಲ್ಲಿ ಆಹಾರ ಮಳಿಗೆಗಳಿಗೆ ರಿಯಲ್ ಎಸ್ಟೇಟ್ ದುಬಾರಿಯಾಗಿದೆ. ಆದರೆ ಅದು ಇಷ್ಟು ದುಬಾರಿ ಎಂದು ನನಗೆ ತಿಳಿದಿರಲಿಲ್ಲ” ಎಂದಿದ್ದಾರೆ.
ಆನ್‌ಲೈನ್‌ನಲ್ಲಿ ಈ ಹಂಚಿಕೊಂಡಾಗಿನಿಂದ ನೆಟ್ಟಿಗರು ಸಹ ಅಚ್ಚರಿ ವ್ಯಕ್ತಪಡಿಸಿದ್ದು, ಇದು ನಂಬಲಸಾಧ್ಯ ಎಂದಿದ್ದಾರೆ.