ರೆಸಾರ್ಟ್ ಗಳು, ಹೊಟೇಲ್ ಗಳು, ಲಾಡ್ಜ್ ಗಳು ತಮ್ಮಲ್ಲಿ ರೂಂ ಬುಕ್ ಮಾಡಿದ ಗ್ರಾಹಕರನ್ನು ಕರೆ ತರಲು ಕಾರು ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿದೆ. ಆದರೆ, ಭಾರತದಲ್ಲಿ ಗ್ರಾಹಕರನ್ನು ಹೆಲಿಕಾಪ್ಟರ್ ಮೂಲಕ ರೆಸಾರ್ಟ್ ಗೆ ಕರೆದೊಯ್ಯುವುದನ್ನು ಕೇಳಿದ್ದೀರಾ? ಹೌದು, ಭಾರತದಲ್ಲಿ ಇಂತಹದ್ದೊಂದು ರೆಸಾರ್ಟ್ ಇದೆ. ಇಲ್ಲಿ ರೆಸಾರ್ಟ್ ಗೆ ಸಮೀಪದಲ್ಲಿರುವ ನಗರ ಅಥವಾ ಪಟ್ಟಣಕ್ಕೆ ನೀವು ಬಂದಿಳಿದರೆ ಸಾಕು. ನಿಮ್ಮನ್ನು ರೆಸಾರ್ಟ್ ಗೆ ಕರೆದೊಯ್ಯಲು ಹೆಲಿಕಾಪ್ಟರ್ ಬರುತ್ತದೆ !
ಮಹಾರಾಷ್ಟ್ರದ ಪನ್ಹೇಲಿಯ ಏರೋ ವಿಲೇಜ್ ನಲ್ಲಿ ಇಂತಹದ್ದೊಂದು ರೆಸಾರ್ಟ್ ಇದೆ. ಇದು ದೇಶದ ಮೊದಲ ಲಕ್ಷುರಿ ಫ್ಲೈ-ಇನ್ ರೆಸಾರ್ಟ್ ಆಗಿದೆ. ಇನ್ನು ರೆಸಾರ್ಟ್ ಗೆ ಬಂದಿಳಿದ ಗ್ರಾಹಕನಿಗೆ ಸ್ವರ್ಗಕ್ಕೆ ಬಂದಂತೆ ಭಾಸವಾಗುತ್ತದೆ. ಏಕೆಂದರೆ, ಇಲ್ಲಿರುವ ಐಶಾರಾಮಿ ಸೌಲಭ್ಯಗಳು ಅವನಿಗೆ ಸ್ವರ್ಗಕ್ಕೆ ಮೂರೇ ಗೇಣು ಇದ್ದಂತೆ ಕಾಣುತ್ತದೆ.
ತಲೆ ತಿರುಗಿಸುವಂತಿದೆ ಟೊಮೆಟೊ ಬೆಲೆ, ಶತಕ ದಾಟಿದ ಚಿಲ್ಲರೆ ದರ, ಹೋಲ್ಸೇಲ್ ದರ 15 ಕೆಜಿಗೆ 1080 ರೂ.
ಸಹ್ಯಾದ್ರಿ ಶ್ರೇಣಿಯ ಒಡಲಲ್ಲಿ ಏಕಾಂತ ಪ್ರದೇಶದಲ್ಲಿರುವ ಈ ರೆಸಾರ್ಟ್ ಸಮುದ್ರ ಮಟ್ಟದಿಂದ 1200 ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿನ ಊಟೋಪಚಾರ ಬಾಯಲ್ಲಿ ನೀರು ತರಿಸಿದರೆ, ಜಾಯ್ ರೈಡ್ಸ್, ಗಾಲ್ಫ್, ಜಂಗಲ್ ಸಫಾರಿಯಂತಹ ಇನ್ನೂ ಅನೇಕ ಚಟುವಟಿಕೆಗಳು ಸಾಕಷ್ಟು ವಿನೋದವನ್ನು ಉಂಟುಮಾಡುತ್ತವೆ.
ಅಲ್ಲದೇ, ಇಂಡೋರ್ ಸ್ಟೇಡಿಯಂಗಳು, ಜಲಪಾತಗಳಿಗೆ ಟ್ರೆಕ್ಕಿಂಗ್, ಜಿಮ್, ಖಾಸಗಿ ಸಿನೆಮಾ ಹಾಲ್ ಗಳು ಮತ್ತು ಸ್ವಿಮ್ಮಿಂಗ್ ಪೂಲ್ ಗಳೂ ಇಲ್ಲಿವೆ. ರೆಸಾರ್ಟ್ ನ ಒಂದು ರೂಂನ ದರ ಒಂದು ದಿನಕ್ಕೆ 11,000 ರೂಪಾಯಿ ಇದ್ದರೆ, ಇಡೀ ವಿಲ್ಲಾವನ್ನು ಪಡೆಯಬೇಕಾದರೆ 45,000 ರೂಪಾಯಿ ಕೊಡಬೇಕು.