alex Certify BIG NEWS: ಪಠ್ಯಪುಸ್ತಕಗಳಲ್ಲಿ ಇತಿಹಾಸ ಸರಿಪಡಿಸಲು ಮುಂದಾದ ಸರ್ಕಾರ – ಸಲಹೆ ಸ್ವೀಕಾರಕ್ಕೆ ಗಡುವು ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಠ್ಯಪುಸ್ತಕಗಳಲ್ಲಿ ಇತಿಹಾಸ ಸರಿಪಡಿಸಲು ಮುಂದಾದ ಸರ್ಕಾರ – ಸಲಹೆ ಸ್ವೀಕಾರಕ್ಕೆ ಗಡುವು ವಿಸ್ತರಣೆ

ನವದೆಹಲಿ: ಪಠ್ಯಪುಸ್ತಕಗಳಲ್ಲಿ ಇತಿಹಾಸವನ್ನು ಸರಿಪಡಿಸುವ ಕುರಿತಂತೆ ಕ್ರಮ ಕೈಗೊಳ್ಳಲಾಗಿದ್ದು, ಸಲಹೆಗಳನ್ನು ಪಡೆಯಲಾಗುತ್ತಿದೆ.

ಭಾರತದಾದ್ಯಂತ ಪಠ್ಯಪುಸ್ತಕಗಳಲ್ಲಿ ಇತಿಹಾಸ ಪೂರ್ವಕ ಉಲ್ಲೇಖಗಳನ್ನು ಗುರುತಿಸಲು ಮತ್ತು ಭಾರತೀಯ ಇತಿಹಾಸದಲ್ಲಿ ಅವಧಿಗಳ ಅಸಮರ್ಪಕ ಪ್ರಾತಿನಿಧ್ಯವನ್ನು ಸರಿಪಡಿಸಲು ಪಾರ್ಲಿಮೆಂಟರಿ ಸಮಿತಿ ಕಾರ್ಯನಿರ್ವಹಿಸುತ್ತಿದೆ.

ಬಿಜೆಪಿ ಸಂಸದ ಮತ್ತು ಸಂಸತ್ತಿನ ಶಿಕ್ಷಣ ಸಚಿವಾಲಯದ ಅಧ್ಯಕ್ಷ ವಿನಯ ಸಹಸ್ರಬುದ್ಧೆ ಅವರು, ಭಾರತದ ಶಾಲಾ ಪಠ್ಯಪುಸ್ತಕಗಳಲ್ಲಿ 1998 ರ ಪೋಖ್ರಾನ್ ಪರಮಾಣು ಪರೀಕ್ಷೆ ಮತ್ತು 1975 ರ ತುರ್ತುಪರಿಸ್ಥಿತಿ ಬಗ್ಗೆ ಪ್ರಾತಿನಿಧ್ಯ ನೀಡಬೇಕಿದೆ ಎಂದು ಹೇಳಿದ್ದಾರೆ.

ಇಲಾಖೆಗೆ ಸಂಬಂಧಿಸಿದಂತಹ ಸಂಸದೀಯ ಸ್ಥಾಯಿ ಸಮಿತಿ ಈ ಕುರಿತಾಗಿ ಜನರಿಂದ, ಮಧ್ಯಸ್ಥಗಾರರಿಂದ ಸಲಹೆಗಳನ್ನು ಪಡೆಯುತ್ತಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾತ್ರವಲ್ಲದೇ, ವಿಷಯದ ಬಗ್ಗೆ ಆಸಕ್ತಿ ಹೊಂದಿದವರು ಜೂನ್ 30 ರೊಳಗೆ ತಮ್ಮ ಸಲಹೆಗಳನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು. ಕೊರೋನಾ ಎರಡನೇ ಅಲೆ ಕಾರಣದಿಂದಾಗಿ ಕೆಲವು ತಜ್ಞರು ಸಲಹೆಗಳನ್ನು ನೀಡಲು ಸಾಧ್ಯವಾಗದಿರುವುದನ್ನು ಗಮನದಲ್ಲಿಟ್ಟುಕೊಂಡು ಜುಲೈ 15 ರ ವರೆಗೆ ಗಡುವು ವಿಸ್ತರಿಸಲು ಸದನ ಸಮಿತಿ ನಿರ್ಧರಿಸಿದೆ.

ವರದಿಯು ಬಹುತೇಕ ಅಂತಿಮವಾಗಿದೆ. ಆದರೂ ನಂತರ ಕೆಲವು ಜನರು ಸಲಹೆಗಳನ್ನು ನೀಡಲು ಗಡುವು ವಿಸ್ತರಿಸುವ ಕುರಿತು ಮನವಿ ಮಾಡಿದ್ದರು. ಕೋವಿಡ್ ಎರಡನೇ ಅಲೆ ಪರಿಣಾಮದ ಕಾರಣ ಅನೇಕರಿಗೆ ಸಲಹೆ ನೀಡಲು ಸಾಧ್ಯವಾಗಿರಲಿಲ್ಲ. ಇದನ್ನು ಪರಿಗಣಿಸಿ ಜುಲೈ 15 ರವರೆಗೆ ಸಲಹೆ ನೀಡಲು ಗಡುವು ವಿಸ್ತರಿಸಲಾಗಿದೆ.

ರಾಜ್ಯಸಭಾ ಸಚಿವಾಲಯ(ಸಮಿತಿ ವಿಭಾಗ) ಹೊರಡಿಸಿದ ಹಿಂದಿನ ಟಿಪ್ಪಣಿಯಲ್ಲಿ, ಶಾಲಾ ಪಠ್ಯಪುಸ್ತಕಗಳಲ್ಲಿನ ಸುಧಾರಣೆ ಕ್ರಮಗಳಲ್ಲಿ ಇತಿಹಾಸಪೂರ್ವ ಸಂಗತಿಗಳ ಉಲ್ಲೇಖಗಳನ್ನು ತೆಗೆದುಹಾಕುವುದು. ಪಠ್ಯಪುಸ್ತಕಗಳಿಂದ ರಾಷ್ಟ್ರೀಯ ವೀರರ ಕುರಿತಾದ ವಿರೂಪಗಳನ್ನು ತೆಗೆದುಹಾಕುವುದಾಗಿದೆ. ಎಲ್ಲಾ ಅವಧಿಗಳಿಗೆ ಸಮಾನ ಅಥವಾ ಪ್ರಮಾಣಾನುಗುಣ ಉಲ್ಲೇಖಗಳನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ಹೇಳಲಾಗಿದೆ. ಇತಿಹಾಸವನ್ನು ಸರಿಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಮೈತ್ರೇಯಿ, ಗಾರ್ಗಿ, ಜಾನ್ಸಿ ರಾಣಿ, ರಾಣಿ ಚೆನ್ನಮ್ಮ, ಚಾಂದ್ ಬೀಬಿ, ಜಲ್ಕರಿ ಬಾಯಿ ಅವರಂತಹ ಶ್ರೇಷ್ಠ ಆಡಳಿತಗಾರರು, ಮಹಿಳಾ ವೀರರ ಪಾತ್ರವನ್ನು ಕೂಡ ಪಠ್ಯಪುಸ್ತಕದಲ್ಲಿ ಸೇರಿಸಬೇಕಿದೆ.

ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಜುಲೈ 15 ರೊಳಗೆ ಇಮೇಲ್ ಮೂಲಕ ಸಲಹೆಗಳನ್ನು ನೀಡುವಂತೆ ಕೇಳಿಕೊಳ್ಳಲಾಗಿದೆ.

ವಿನಯ್ ಸಹಸ್ರಬುದ್ದೆ ಅವರು, ನಿರ್ದಿಷ್ಟ ಗುಂಪಿನ ಇತಿಹಾಸಕಾರರು ಇತಿಹಾಸಪೂರ್ವ ಉಲ್ಲೇಖಗಳನ್ನು ಮಾಡಿದ್ದಾರೆ. ಕೆಲವು ಇತಿಹಾಸಕಾರರು ಸಂಸ್ಕೃತಿಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. NCERT ಮತ್ತು ICHR ಸಹಯೋಗದಲ್ಲಿ ಇತಿಹಾಸ ಬರವಣಿಗೆಯ ಕೆಲಸ ಮಾಡಬೇಕಿದೆ. ನಿರ್ದಿಷ್ಟ ರೀತಿಯ ಇತಿಹಾಸಕಾರರ ಪ್ರಾಬಲ್ಯವನ್ನು ಕೊನೆಗೊಳಿಸಬೇಕಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...