ಬೆಳಗಾವಿ: ಒಕ್ಕಲಿಗರಿಗೆ ಎರಡು ಸಿ ಮೀಸಲಾತಿ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
3 ಬಿ ನಲ್ಲಿದ್ದ ಲಿಂಗಾಯಿತರಿಗೆ ಎರಡು ಡಿ ನಲ್ಲಿ ಮೀಸಲಾತಿ ನೀಡಲಾಗುವುದು. ಹೊಸದಾಗಿ 2 ಸಿ ಮತ್ತು 3 ಡಿ ಕೆಟಗರಿ ಸೃಷ್ಟಿಸಲಾಗಿದ್ದು, 3 ಎ ನಲ್ಲಿದ್ದ ಒಕ್ಕಲಿಗರಿಗೆ ಎರಡು ಸಿ ಮೀಸಲಾತಿ ನೀಡಲಾಗಿದೆ. 3 ಬಿ ನಲ್ಲಿದ್ದ ಲಿಂಗಾಯಿತರಿಗೆ 2 ಡಿ ಮೀಸಲಾತಿ ನೀಡಲಾಗಿದೆ.
ಪಂಚಮಸಾಲಿ ಸಮುದಾಯಕ್ಕೆ 2 ಡಿ ಮೀಸಲಾತಿ ನೀಡಲು ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ. ಪಂಚಮಸಾಲಿ ಸಮುದಾಯ ಮತ್ತು ಒಕ್ಕಲಿಗರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಎರಡು ಪ್ರಬಲ ಸಮುದಾಯಕ್ಕೆ ಪ್ರತ್ಯೇಕ ಕೆಟಗರಿ ಕಲ್ಪಿಸಲಾಗಿದೆ.
ಯಾವುದೇ ಕೆಟಗರಿಯ ಮೀಸಲಾತಿ ಬದಲಾವಣೆ ಮಾಡಲಾಗಿಲ್ಲ. ಒಕ್ಕಲಿಗರಿಗೆ 2 ಸಿ ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಗಿದೆ. 2 ಎ, 2 ಬಿ ಮೀಸಲಾತಿ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.