ಶಿವಮೊಗ್ಗ: ವ್ಯಕ್ತಿಯೊಬ್ಬರ ಪಾನ್ ನಂಬರ್ ದುರ್ಬಳಕೆ ಮಾಡಿಕೊಂಡು 7 ನಕಲಿ ಕಂಪನಿಗಳನ್ನು ಸ್ಥಾಪಿಸಿ ಜಿಎಸ್‌ಟಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಅಕೌಂಟೆಂಟ್ ಒಬ್ಬರು ತಮ್ಮ ಸ್ನೇಹಿತನಿಗೆ ಫೋನ್ ಪೇ ಮೂಲಕ ಹಣ ಕಳಿಸಲು ಹೋದಾಗ ಬ್ಯಾಂಕ್ ಖಾತೆ ಫ್ರೀಜ್ ಆಗಿರುವುದು ಗಮನಕ್ಕೆ ಬಂದಿದೆ. ಇದನ್ನು ವಿಚಾರಿಸಲು ಬ್ಯಾಂಕಿಗೆ ಹೋದಾಗ ಮುಂಬೈ ಕೇಂದ್ರೀಯ ಜಿಎಸ್ಟಿ ಕಚೇರಿ ನೋಟಿಸ್ ನೀಡಿದ ಮೇರೆಗೆ ಬ್ಯಾಂಕ್ ಖಾತೆ ಫ್ರೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನು ತಿಳಿದ ಅಕೌಂಟೆಂಟ್ ಆತಂಕಕ್ಕೆ ಒಳಗಾಗಿದ್ದಾರೆ.
ಅವರ ಪಾನ್ ಸಂಖ್ಯೆ ಬಳಕೆ ಮಾಡಿಕೊಂಡು 7 ನಕಲಿ ಕಂಪನಿಗಳನ್ನು ಸ್ಥಾಪಿಸಿದ್ದು, ಈ ಮೂಲಕ ಜಿಎಸ್ಟಿ ವಂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗಿತ್ತು. ಆನ್ಲೈನ್ ಮೂಲಕ ತಮ್ಮ ಪಾನ್ ಕಾರ್ಡ್ ಬಳಸಿ ಕಂಪನಿಗಳನ್ನು ರಿಜಿಸ್ಟರ್ ಮಾಡಿಕೊಂಡು ತೆರೆಗೆ ವಂಚನೆ ಮಾಡಿರುವುದಾಗಿ ಆರೋಪಿಸಿ ಅಕೌಂಟೆಂಟ್ ಶಿವಮೊಗ್ಗದ ಸಿಇಎನ್ ಠಾಣಿಗೆ ದೂರು ನೀಡಿದ್ದಾರೆ.