ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದಿದೆ. ಆಧಾರ್ ಹಾಗೂ ಪಾನ್ ದೇಶದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ಹಿಡಿದು ಅನೇಕ ಸೇವೆ ಪಡೆಯಲು ಪಾನ್ ಅನಿವಾರ್ಯವಾಗಿದೆ. ಹಾಗೆ ಆಧಾರ್ ಕೂಡ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ.
ಮಹಿಳೆಯರು ಪಿಜ್ಜಾ ತಿನ್ನುವುದನ್ನು ಟಿವಿಯಲ್ಲಿ ತೋರಿಸುವಂತಿಲ್ಲ..! ಈ ದೇಶದಲ್ಲಿ ಜಾರಿಯಾಗಿದೆ ವಿಚಿತ್ರ ನಿಯಮ
ಆಧಾರ್ ಹಾಗೂ ಪಾನ್ ಕಾರ್ಡ್ ಹೊಂದಿರುವವರು, ಆಧಾರ್ ಜೊತೆ ಪಾನ್ ಲಿಂಕ್ ಮಾಡುವುದು ಅಗತ್ಯವಾಗಿದೆ. ಮಾರ್ಚ್ 31, 2022ರವರೆಗೆ ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಅವಕಾಶವಿದೆ. ಆದ್ರೆ ಇಂದೇ ಈ ಕೆಲಸ ಮಾಡಿದ್ರೆ ಸಾಕಷ್ಟು ಪ್ರಯೋಜನ ಪಡೆಯಬಹುದು. ಒಂದು ವೇಳೆ ಕೊನೆ ಅವಧಿ ನಂತ್ರವೂ ಆಧಾರ್ ಜೊತೆ ಪಾನ್ ಲಿಂಕ್ ಆಗಿಲ್ಲವೆಂದ್ರೆ ಭಾರೀ ದಂಡ ಪಾವತಿಸಬೇಕಾಗುತ್ತದೆ.
ಬಾಲ್ಯದಲ್ಲಿಯೇ ಮಕ್ಕಳಿಗೆ ಈ ಸಂಗತಿ ಕಲಿಸುವ ಮೂಲಕ ಭವಿಷ್ಯ ರೂಪಿಸಿ
ಸರ್ಕಾರ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಾನ್ ಜೊತೆ ಆಧಾರ್ ಲಿಂಕ್ ಮಾಡದಿದ್ದರೆ, ಗರಿಷ್ಠ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಆಧಾರ್ ಜೊತೆ ಪಾನ್ ಲಿಂಕ್ ಮಾಡುವುದು ಕಷ್ಟದ ಕೆಲಸವಲ್ಲ.
ಮೊದಲು ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಬೇಕು. ಆಧಾರ್ ಕಾರ್ಡ್‌ನಲ್ಲಿ ನೀಡಿರುವಂತೆ ಹೆಸರು, ಪಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಂತ್ರ ಕ್ಯಾಪ್ಚಾ ಕೋಡ್ ನಮೂದಿಸಿ. ನಂತ್ರ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಾನ್ ಆಧಾರ್ ಜೊತೆ ಲಿಂಕ್ ಆಗುತ್ತದೆ.
ಕುಣಿಯಲು ಹೋಗಿ ಕೈ ಮುರಿದುಕೊಂಡ ವಧು..! ಬರೋಬ್ಬರಿ 1.5 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ
ವೆಬ್ ಸೈಟ್ ನಲ್ಲಿ ಮಾತ್ರವಲ್ಲ ಫೋನ್ ನಲ್ಲಿಯೂ ನೀವು ಲಿಂಕ್ ಮಾಡಬಹುದು. ಎಸ್ಎಂಎಸ್ ಸಹಾಯ ಪಡೆಯಬೇಕಾಗುತ್ತದೆ. ನೋಂದಾಯಿತ ಮೊಬೈಲ್‌ನಿಂದ 12 ಅಂಕಿಯ ಪಾನ್ ಸಂಖ್ಯೆಯನ್ನು ನಮೂದಿಸಿದ ನಂತರ ಸ್ಪೇಸ್ ನೀಡಿ 10 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಇದನ್ನು 567678 ಅಥವಾ 56161 ಗೆ ಎಸ್‌ಎಂಎಸ್ ಮಾಡಬೇಕು.