ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಮಾರ್ಚ್ 31, 2022 ರಿಂದ ಮಾರ್ಚ್ 31, 2023 ರವರೆಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಿದೆ. ಇದು ಅನೇಕರಿಗೆ ನಿರಾಳತೆ ತಂದಿರಬಹುದು.
ಆದರೂ ಏಪ್ರಿಲ್ 1, 2022 ರ ಬಳಿಕ ಈ ಎರಡು ದಾಖಲೆಗಳನ್ನು ಲಿಂಕ್ ಮಾಡುವ ಯಾರಿಗಾದರೂ ದಂಡ ವಿಧಿಸಲಾಗುತ್ತದೆ. ಆಧಾರ್ ಸಂಖ್ಯೆಗೆ ಪ್ಯಾನ್ ಅನ್ನು ಜೂನ್ 2022 ರ ವರೆಗೆ ಲಿಂಕ್ ಮಾಡಿದರೆ ರೂ. 500 ದಂಡ ಮತ್ತು ಅದರ ನಂತರ ರೂ. 1,000 ಶುಲ್ಕ ವಿಧಿಸಲಾಗುತ್ತದೆ ಎಂದು ಸಿಬಿಡಿಟಿ ಪ್ರಕಟಿಸಿದೆ.
ಬ್ಯಾಂಕ್ ಲಾಕರ್ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಸುದ್ದಿ
ಆದಾಯ ತೆರಿಗೆ ನಿಯಮದಂತೆ ವ್ಯಕ್ತಿಯ ಪಾನ್ ನಿಷ್ಕ್ರಿಯಗೊಂಡಿದ್ದರೆ, ಅವನು ತನ್ನ ಪಾನ್ ಅನ್ನು ಆಧಾರ್ ಜೊತೆ ಜೋಡಿಸಲು ಸಾಧ್ಯವಾಗದು. ಅಂತಹ ವೈಫಲ್ಯಕ್ಕಾಗಿ ಕಾಯಿದೆಯ ಅಡಿಯಲ್ಲಿ ಎಲ್ಲಾ ಪರಿಣಾಮಗಳಿಗೆ ಆತನೆ ಹೊಣೆಗಾರನಾಗಿರುತ್ತಾನೆ.
ವ್ಯಕ್ತಿಯ ಪ್ಯಾನ್ ನಿಷ್ಕ್ರಿಯಗೊಂಡರೆ,
– ವ್ಯಕ್ತಿಯು ಅಮಾನ್ಯವಾದ ಪಾನ್‌ನೊಂದಿಗೆ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ.
– ರಿಟರ್ನ್‌ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ.
– ನಿಷ್ಕ್ರಿಯ ಪಾನ್ ಗಳು ಬಾಕಿಯಿರುವ ಮರುಪಾವತಿಗೆ ಅರ್ಹವಾಗಿರುವುದಿಲ್ಲ.
– ನಿಷ್ಕ್ರಿಯವಾಗಿರುವಾಗ, ದೋಷಪೂರಿತ ರಿಟರ್ನ್‌ಗಳಂತಹ ಬಾಕಿ ಉಳಿದಿರುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದಿಲ್ಲ.
– ಪಾನ್ ನಿಷ್ಕ್ರಿಯವಾಗುವುದರಿಂದ ಹೆಚ್ಚಿನ ದರದಲ್ಲಿ ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ.
– ಅನೇಕ ರೀತಿಯ ಹಣಕಾಸಿನ ವಹಿವಾಟುಗಳಿಗೆ ಪಾನ್ ನಿರ್ಣಾಯಕ, ಕೆವೈಸಿ ಮಾನದಂಡವಾಗಿರುವುದರಿಂದ, ತೆರಿಗೆದಾರರು ಇತರ ಫಾರ್ಮ್‌ಗಳನ್ನು ಭರ್ತಿ ಮಾಡುವಲ್ಲಿ ಸಮಸ್ಯೆ ಹೊಂದಬಹುದು.