ದುಬಾರಿ ಶಾಪಿಂಗ್ ಮಾಡುವವರು ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಶಾಪಿಂಗ್ ಮಾಡಲು ಹೊರಟಿದ್ದರೆ ಆಧಾರ್ ಜೊತೆ ಪಾನ್ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ. ಸೆಪ್ಟೆಂಬರ್ 30ರವರೆಗೆ ಆಧಾರ್ ಗೆ ಪಾನ್ ಲಿಂಕ್ ಮಾಡಲು ಅವಕಾಶವಿದೆ. ಈ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಲಾಗ್ತಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ ಇದ್ರ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸಿದ್ಧವಾಗಿದೆ. ಆಧಾರ್ ಜೊತೆ ಪಾನ್ ಲಿಂಕ್ ಅಲ್ಲದೆ, ಅಮಾನ್ಯ ಪಾನ್ ಬಳಸಿದ್ರೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಪಾನ್ ಜೊತೆ ಆಧಾರ್ ಲಿಂಕ್ ಆಗದೆ ಹೋದಲ್ಲಿ ಶಾಪಿಂಗ್ ಗೆ ಮಾತ್ರವಲ್ಲ ಇನ್ನೂ ಅನೇಕ ಕೆಲಸಗಳಿಗೆ ಅಡ್ಡಿಯಾಗಲಿದೆ.
ಪಾನ್ – ಆಧಾರ್ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಕೆವೈಸಿ ಕೂಡ ಅಮಾನ್ಯವಾಗಿರುತ್ತದೆ. ಅಮಾನ್ಯ ಪಾನ್ ಬಳಕೆ ಅಪರಾಧ. ಇದಕ್ಕಾಗಿ 1 ಸಾವಿರಕ್ಕಿಂತ ಹೆಚ್ಚು ದಂಡ ಕಟ್ಟಬೇಕಾಗುತ್ತದೆ. ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಲು ಪಾನ್ ಕಡ್ಡಾಯವಾಗಿರುತ್ತದೆ. ಒಂದು ವೇಳೆ ಪಾನ್ ಅಮಾನ್ಯವಾಗಿದ್ದರೆ, ಎಸ್‌ಐಪಿ ಅಥವಾ ಬೇರೆ ಯಾವುದೇ ರೀತಿಯಲ್ಲಿ ಎಮ್‌ಎಫ್‌ನಲ್ಲಿ ಹಣವನ್ನು ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಲು ಮತ್ತು 50,000 ಕ್ಕಿಂತ ಹೆಚ್ಚು ಹಣವನ್ನು ಠೇವಣಿ ಇಡಲು ಮತ್ತು ವಿತ್ ಡ್ರಾ ಮಾಡಲು ಪಾನ್ ಅಗತ್ಯ. 5 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಆಭರಣಗಳನ್ನು ಖರೀದಿಸಿದರೆ, ಪಾನ್ ಕಾರ್ಡ್ ವಿವರಗಳನ್ನು ನೀಡಬೇಕಾಗುತ್ತದೆ. ಆಧಾರ್ ಗೆ ಪಾನ್ ಲಿಂಕ್ ಆಗಿಲ್ಲದ ಪಾನ್ ನೀಡಲು ಸಾಧ್ಯವಿಲ್ಲ.
5 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಾಹನ ಖರೀದಿ ವೇಳೆ ಪಾನ್ ವಿವರ ನೀಡಬೇಕು. ಪಾನ್ – ಆಧಾರ್ ಲಿಂಕ್ ಆಗದೆ ಹೋದಲ್ಲಿ ವಾಹನ ಖರೀದಿ ಸಾಧ್ಯವಿಲ್ಲ.
ಆದಾಯ ತೆರಿಗೆ ವೆಬ್‌ಸೈಟ್ ನಲ್ಲಿ ಪಾನ್-ಆಧಾರ್ ಲಿಂಕ್ ಮಾಡಬಹುದು. https://www.utiitsl.com/ ಅಥವಾ https://www.egov-nsdl.co.in/ ಗೆ ಹೋಗಿ ಲಿಂಕ್ ಮಾಡಬಹುದು. ಪಾನ್-ಆಧಾರ್ ಅನ್ನು ಎಸ್ಎಂಎಸ್ ಮೂಲಕವೂ ಲಿಂಕ್ ಮಾಡಬಹುದು. ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಬೇಕು.UIDAIPAN (12 ಅಂಕಿಯ ಆಧಾರ್ ಸಂಖ್ಯೆ) ಜಾಗ (10 ಅಂಕಿಯ ಪಾನ್) ಬರೆದು ಕಳುಹಿಸಬೇಕು.