alex Certify ಪಾನ್ – ಆಧಾರ್‌ ಲಿಂಕಿಂಗ್ ಎಷ್ಟು ಸರಳ ಗೊತ್ತೇ…? ಇಲ್ಲಿದೆ ಈ ಕುರಿತ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾನ್ – ಆಧಾರ್‌ ಲಿಂಕಿಂಗ್ ಎಷ್ಟು ಸರಳ ಗೊತ್ತೇ…? ಇಲ್ಲಿದೆ ಈ ಕುರಿತ ವಿವರ

ಶಾಶ್ವತ ಖಾತೆ ಸಂಖ್ಯೆ (ಪಾನ್) ಜೊತೆಗೆ ಆಧಾರ್‌ ಲಿಂಕಿಂಗ್ ಮಾಡಲು ಮಾರ್ಚ್ 31, 2022 ಕಡೆಯ ದಿನಾಂಕವೆಂದು ಹೇಳಲಾಗಿದೆ. ಈ ಹಿಂದೆ ಇದ್ದ ಡೆಡ್ಲೈನ್ ‌ಅನ್ನು ಕೊರೋನಾ ಸೇರಿದಂತೆ ಅನೇಕ ಕಾರಣಗಳಿಂದಾಗಿ ಒಂದು ವರ್ಷದ ಮಟ್ಟಿಗೆ ಮುಂದೂಡಲಾಗಿತ್ತು.

ಪಾನ್ ಜೊತೆಗೆ ನಿಮ್ಮ ಆಧಾರ್‌ ಲಿಂಕಿಂಗ್ ಆಗಿಲ್ಲವಾದಲ್ಲಿ, ಪಾನ್ ‌ಅನ್ನು ನಿಷ್ಕ್ರಿಯಗೊಳಿಸಲಾಗುವುದು. ಇದರಿಂದ ಯಾವುದೇ ಬ್ಯಾಂಕಿನ ಗ್ರಾಹಕರಿಗೂ ನಿರ್ದಿಷ್ಟ ವ್ಯವಹಾರಗಳನ್ನು ಮಾಡುವುದು ಅಸಾಧ್ಯವಾಗಬಹುದು.

ಚಿನ್ನದ ಮೇಲೆ ಗೃಹ ಸಾಲ ಕೊಡಲು ಎಸ್‌.ಬಿ.ಐ. ಹೊಸ ಸ್ಕೀಂ

ಆನ್ಲೈನ್ ಮೂಲಕ ಪಾನ್‌-ಆಧಾರ್‌ ಲಿಂಕಿಂಗ್ ಮಾಡಲು ಈ ಕೆಳಗಿನಂತೆ ಮಾಡಿ:

ಹಂತ 1: UIDAI ನ ಅಧಿಕೃತ ವೆಬ್‌ಸೈಟ್ uidai.gov.in ಗೆ ಹೋಗಬೇಕು

ಹಂತ 2: ಈಗ, ‘My Aadhaar’ ಟ್ಯಾಬ್‌ನಲ್ಲಿ ‘Check Aadhaar/Bank Account Linking Status’ ಕ್ಲಿಕ್ ಮಾಡಿ.

ಹಂತ 3: ಅದರ ನಂತರ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ

ಹಂತ 4: ನಂತರ ಭದ್ರತಾ ಕೋಡ್ ಅನ್ನು ನಮೂದಿಸಬೇಕು ಮತ್ತು ‘Send OTP’ ಕ್ಲಿಕ್ ಮಾಡಿ

ಹಂತ 5: ಇದರ ನಂತರ, ನೋಂದಾಯಿತ ಸಂಖ್ಯೆಗೆ OTP ಬರುತ್ತದೆ, ಅದರ ಮೂಲಕ ಲಾಗ್ ಇನ್ ಮಾಡಬಹುದು

ಲಾಗಿನ್ ಆದ ನಂತರ ಬ್ಯಾಂಕ್ ಖಾತೆಯು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಹೇಗೆ ?

ಪಾನ್ ಜೊತೆಗೆ ಆಧಾರ್ ಲಿಂಕ್ ಮಾಡಲು, ಎಸ್‌ಬಿಐ ಗ್ರಾಹಕರು ಆದಾಯ ತೆರಿಗೆ ಭಾರತದ ಹೊಸ ಅಧಿಕೃತ ವೆಬ್‌ಸೈಟ್ incometaxindiaefiling.gov.in ಗೆ ಭೇಟಿ ನೀಡಬೇಕು. ನಂತರ ಈ ಸರಳ ಪ್ರಕ್ರಿಯೆಗಳನ್ನು ಪಾಲಿಸಬೇಕು:

ಹಂತ 1: ಮೊದಲಿಗೆ ನಿಮ್ಮನ್ನು ಹೊಸ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ನಿಮ್ಮ ಪಾನ್ ಸಂಖ್ಯೆಯೇ ಬಳಕೆದಾರರ ಐಡಿ ಆಗಿರುತ್ತದೆ ಎಂದು ನೆನಪಿರಲಿ.

ಹಂತ 2: ಈಗ, ಬಳಕೆದಾರ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗಿನ್ ಮಾಡಿ

ಹಂತ 3: ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ ‘Profile Settings’ ಗೆ ಹೋಗಿ ಮತ್ತು ‘Link Aadhaar’ ಕ್ಲಿಕ್ ಮಾಡಿ

ಹಂತ 4: ಪಾನ್ ವಿವರಗಳ ಪ್ರಕಾರ ಹೆಸರು ಜನ್ಮ ದಿನಾಂಕ ಮತ್ತು ಲಿಂಗದಂತಹ ವಿವರಗಳನ್ನು ಈಗಾಗಲೇ ಉಲ್ಲೇಖಿಸಲಾಗುತ್ತದೆ

ಹಂತ 5: ಆಧಾರ್‌ನಲ್ಲಿ ನಮೂದಿಸಲಾದ ಪಾನ್ ವಿವರಗಳನ್ನು ಪರದೆಯ ಮೇಲೆ ಪರಿಶೀಲಿಸಿ.

ಹಂತ 6: ವಿವರಗಳು ಹೊಂದಾಣಿಕೆಯಾದರೆ, ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು “link now” ಬಟನ್ ಕ್ಲಿಕ್ ಮಾಡಿ

ಹಂತ 7: ನಿಮ್ಮ ಆಧಾರ್ ಅನ್ನು ಪಾನ್‌ಗೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ತಿಳಿಸುವ ಸಂದೇಶವು ಪಾಪ್ ಅಪ್ ಆಗುತ್ತದೆ

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...