alex Certify ಐದನೇ ಪತಿಗೆ ವಿಚ್ಛೇದನ ಕೊಟ್ಟ ’ಬೇವಾಚ್‌’ ತಾರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐದನೇ ಪತಿಗೆ ವಿಚ್ಛೇದನ ಕೊಟ್ಟ ’ಬೇವಾಚ್‌’ ತಾರೆ

ತಮ್ಮ ಐದನೆ ಪತಿ ಡ್ಯಾನ್ ಹೇಹರ್ಸ್ಟ್‌ ಜೊತೆಗೆ 13 ತಿಂಗಳ ವೈವಾಹಿಕ ಜೀವನಕ್ಕೆ ಬೇವಾಚ್‌ ಖ್ಯಾತಿಯ ಪಮೇಲಾ ಆಂಡರ್ಸನ್‌ ಗುಡ್ ಬೈ ಹೇಳಿದ್ದಾರೆ. ಈ ವಿಚಾರವನ್ನು ಪಮೇಲಾ ಪ್ರತಿನಿಧಿ ಪೀಪಲ್ ನಿಯತಕಾಲಿಕೆಗೆ ಸ್ಪಷ್ಟಪಡಿಸಿದ್ದಾರೆ.

ಈ ಜೋಡಿ ಮದುವೆಯಾದಾಗಿನಿಂದ ಕೆನಡಾದ ವ್ಯಾಂಕುವರ್‌ ದ್ವೀಪದಲ್ಲಿ ವಾಸಿಸುತ್ತಿದ್ದರು. ಆಂಡರ್ಸನ್‌ನ ತಮ್ಮ ಮಾಜಿ ಪತಿ ಜಾನ್ ಪೀಟರ್ಸ್‌ನಿಂದ ವಿಚ್ಛೇದನ ಪಡೆದ ಏಳು ತಿಂಗಳ ಬಳಿಕ ಹೇಹರ್ಸ್ಟ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದ ವಿಚಾರವನ್ನು ಹೇಳಿಕೊಂಡಿದ್ದರು.

ಇದಕ್ಕೂ ಮುನ್ನ ಜಾನ್ ಪೀಟರ್ಸ್, ಜೊತೆಗಿನ ಮದುವೆಯನ್ನು ಬರೀ ಎರಡು ವಾರಗಳಲ್ಲಿ ಕಡಿದುಕೊಂಡಿದ್ದರು ಪಮೇಲಾ. ಖಾಸಗಿ ಸಮಾರಂಭವೊಂದರಲ್ಲಿ ಮದುವೆಯಾಗಿದ್ದ ಆಂಡರ್ಸನ್ ಮತ್ತು ಪೀಟರ್ಸ್, ಮದುವೆ ಪ್ರಮಾಣಪತ್ರ ಪಡೆಯಲು ವಿಫಲರಾಗಿದ್ದರು.

ಪೀಟರ್ಸ್ ಜೊತೆಗಿನ ತಮ್ಮ ಮದುವೆಯ ಫೋಟೋಗಳನ್ನು ಬೇವಾಚ್‌ ತಾರೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಪಮೇಲಾ ಇದಕ್ಕೂ ಮುಂಚೆ ಟಾಮಿ ಲೀ, ಕಿಡ್ ರಾಕ್ ಮತ್ತು ರಿಕ್ ಸೋಲೋಮನ್‌ ಜೊತೆಗೆ ಮದುವೆಯಾಗಿದ್ದರು. ಕೆಲ ಕಾಲದ ಮಟ್ಟಿಗೆ ಫ್ರೆಂಚ್‌ ಫುಟ್ಬಾಲ್ ತಾರೆ ಆದಿಲ್ ರಾಮಿ ಜೊತೆಗೂ ಸಂಪರ್ಕ ಹೊಂದಿದ್ದರು ಪಮೇಲಾ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...