
ಸಾಮಾನ್ಯವಾಗಿ ಜನರು ಮುಂದಿನ ಭವಿಷ್ಯದ ಬಗ್ಗೆ ತಿಳಿಯಲು ಜ್ಯೋತಿಷಿಗಳು, ಹಸ್ತರೇಖಾ ತಜ್ಞರ ಬಳಿ ಹೋಗ್ತಾರೆ. ಪುಣೆಯಲ್ಲಿ ಹಸ್ತರೇಖಾ ತಜ್ಞರ ಬಳಿ ಹೋದ ವ್ಯಕ್ತಿಯೊಬ್ಬನಿಗೆ ತಜ್ಞ ನೀಡಿದ ಸಲಹೆ ದಂಗಾಗಿಸುವಂತಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹಸ್ತರೇಖಾ ಪಂಡಿತ 48 ವರ್ಷದ ರಘುನಾಥ್, ತನ್ನ ಬಳಿ ಬಂದ ವ್ಯಕ್ತಿಯೊಬ್ಬನಿಗೆ ವಿಚ್ಛೇದನ ನೀಡುವಂತೆ ಸಲಹೆ ನೀಡಿದ್ದಾನೆ. ಪತ್ನಿ ಕುಟುಂಬಕ್ಕೆ ಅಶುಭ. ಹಾಗಾಗಿ ಆಕೆಗೆ ವಿಚ್ಛೇದನ ನೀಡಿದ್ರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ ಎಂದಿದ್ದಾನೆ. ಇದನ್ನು ಕೇಳಿದ ವ್ಯಕ್ತಿ, ಪತ್ನಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಇದಾದ ನಂತ್ರ ಮಹಿಳೆ, ಪತಿ ಕುಟುಂಬದ ವಿರುದ್ಧ ದೂರು ನೀಡಿದ್ದಾಳೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಭವಿಷ್ಯ ಕೇಳಿ ಬರುವ ಜನರಿಗೆ ಇಂಥಹ ಸಲಹೆ ನೀಡಿದ್ರೆ ಬಂಧಿಸುವುದಾಗಿ ಪೊಲೀಸರು ರಘುನಾಥ್ ಗೆ ಎಚ್ಚರಿಕೆ ನೀಡಿದ್ದಾರೆ. ಶಾಸಕನಾಗಬೇಕೆಂದ್ರೆ ವಿಚ್ಛೇದನ ನೀಡಬೇಕೆಂದು ರಘುನಾಥ್ ಹೇಳಿದ್ದನಂತೆ. ಇದೇ ಕಾರಣಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಪೀಡಿತೆ ಮಹಿಳೆ ಪತಿ ಮುಂದಾಗಿದ್ದನಂತೆ.