ಉತ್ತರಪ್ರದೇಶ ಮೂಲದ ಪ್ರೇಮಿಯನ್ನು ಮದುವೆಯಾಗಲು ನೇಪಾಳ ಮೂಲಕ ಭಾರತ ತಲುಪಿದ ಪಾಕಿಸ್ತಾನ ಮೂಲಕ ಮಹಿಳೆ ತಾನು ಭಾರತದಲ್ಲೇ ಇರುತ್ತೇನೆ ಎಂದಿದ್ದಾಳೆ. ಈ ಮೂಲಕ ಪಾಕಿಸ್ತಾನ ಮತ್ತು ಭಾರತ ಮೂಲದ ಪ್ರೇಮಿಗಳ ಕಥೆ ಹೊಂದಿರುವ ಗದರ್ ಸಿನಿಮಾವನ್ನೂ ಮೀರಿಸಿದೆ ಈ ಕಥೆ.
ನೇಪಾಳದ ಮೂಲಕ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತವನ್ನು ತಲುಪಿದ ಆರೋಪದಲ್ಲಿ ಬಂಧಿತಳಾಗಿದ್ದ ಪಾಕಿಸ್ತಾನಿ ಮಹಿಳೆ ಐದು ದಿನ ಜೈಲಿನಲ್ಲಿ ಕಳೆದು ಜಾಮೀನು ಪಡೆದಿದ್ದಾರೆ. ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಮತ್ತು ಆಕೆಯ ಗ್ರೇಟರ್ ನೋಯ್ಡಾ ಪ್ರೇಮಿ ಸಚಿನ್ ಮೀನಾ ಶನಿವಾರ ಗೌತಮ್ ಬುದ್ ನಗರದ ಲುಕ್ಸರ್ ಜೈಲಿನಿಂದ ಹೊರಬಂದರು.
ಅಧಿಕಾರಿಗಳ ಪ್ರಕಾರ ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ನೋಯ್ಡಾಗೆ ಬಂದಿದ್ದಳು. ಜೂನ್ 4 ರಂದು ಅವರನ್ನು ಹರಿಯಾಣದ ಬಲ್ಲಭಗಢದಲ್ಲಿ ಬಂಧಿಸಲಾಯಿತು.
ಎಡಿಸಿಪಿ ಅಶೋಕ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, “ಸಚಿನ್ ಜೊತೆ ತೆರಳಲು ಸೀಮಾ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದಾರೆ, ನಾವು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ ಮತ್ತು ಸಂಬಂಧಿಸಿದ ಎಲ್ಲಾ ಏಜೆನ್ಸಿಗಳಿಗೆ ತಿಳಿಸಿದ್ದೇವೆ” ಎಂದು ಹೇಳಿದರು.
ಏತನ್ಮಧ್ಯೆ ಸಚಿನ್ ನೇಪಾಳದಲ್ಲಿ ಭೇಟಿಯಾದ ಸೀಮಾಳನ್ನು ಮದುವೆಯಾಗುವುದಾಗಿ ಹೇಳಿದ್ದು ಅವರೊಂದಿಗೆ ವಾಸಿಸಲು ಬಯಸಿದ್ದಾರೆ.
ನಾವು ಸಚಿನ್ ನನ್ನು ಮದುವೆಯಾಗಿ ಭಾರತದಲ್ಲೇ ಇರಲು ಬಯಸುತ್ತೇನೆ. ನಾನು ನೇಪಾಳದ ಮೂಲಕ ಇಲ್ಲಿಗೆ ಬಂದಿದ್ದೇನೆ. ನಾನು ಭಾರತದಲ್ಲಿ ಉಳಿಯಲು ವೀಸಾಗೆ ಅರ್ಜಿ ಸಲ್ಲಿಸಿದ್ದೆ ಆದರೆ ಅದು ಸಿಗಲಿಲ್ಲ. ವೀಸಾ ನೀಡಲು ಹಲವಾರು ದಾಖಲೆಗಳನ್ನು ಕೇಳಿದರು. ನನಗೆ ವೀಸಾ ನೀಡಬಹುದೇ ಎಂದು ನಿರ್ಧರಿಸಲು ಎರಡೂವರೆ ಮೂರು ತಿಂಗಳುಗಳು ಬೇಕಾಗುತ್ತದೆ ಎಂದು ತಿಳಿದಾಗ ನಾನು ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದೇನೆ. ನಾನು ಇಲ್ಲಿ ಸಚಿನ್ ಜೊತೆ ಇರಲು ಬಯಸುತ್ತೇನೆ ಮತ್ತು ನಾನು ಇಲ್ಲಿಯೇ ಇರುತ್ತೇನೆ. ನಾನು ನನ್ನ ಕೊನೆಯ ಉಸಿರು ಇರುವವರೆಗೂ ಸಚಿನ್ ಜೊತೆ ಭಾರತದಲ್ಲೇ ಇರುವುದಾಗಿ ಪಾಕಿಸ್ತಾನದ ಮಹಿಳೆ ಸೀಮಾ ಹೇಳಿದ್ದಾರೆ.
ಪಾಕಿಸ್ತಾನದ ಸಿಂಧ್ ಮೂಲದ ಸೀಮಾ ಭಾರತಕ್ಕೆ ಅಕ್ರಮವಾಗಿ ಬರುವ ಮಾರ್ಗಗಳನ್ನು ಕಂಡುಹಿಡಿಯಲು ಯೂಟ್ಯೂಬ್ ವೀಡಿಯೊಗಳನ್ನು ಬ್ರೌಸ್ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೀಮಾ 2020 ಲಾಕ್‌ಡೌನ್ ಸಮಯದಲ್ಲಿ ಸಚಿನ್ ಅವರೊಂದಿಗೆ ಪಬ್ ಜೀ ಗೇಮ್ ಮೂಲಕ ಸಂಪರ್ಕಕ್ಕೆ ಬಂದಿದ್ದಾರೆ. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರು ಭೇಟಿಯಾಗಲು ಬಯಸಿದಾಗ ಮಾರ್ಚ್ ನಲ್ಲಿ ನೇಪಾಳಕ್ಕೆ ಬಂದ ಸೀಮಾಳನ್ನು ಸಚಿನ್ ಸ್ವಾಗತಿಸಿದ್ದರು. ಅಲ್ಲಿಂದ ಬಸ್ಸಿನಲ್ಲಿ ನೋಯ್ಡಾಗೆ ಬಂದ ಸೀಮಾಳಿಗೆ ಸಚಿನ್ ಅಂಬೇಡ್ಕರ್ ನಗರ ಕಾಲೋನಿಯಲ್ಲಿ (ನೋಯ್ಡಾದಲ್ಲಿ) ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು.
ಈಗಾಗ್ಲೇ ಪಾಕಿಸ್ತಾನಿ ಮಹಿಳೆ ಮದುವೆಯಾಗಿದ್ದು ಗಂಡನನ್ನು ತೊರೆದು ತನ್ನ ಮಕ್ಕಳೊಂದಿಗೆ ಸಚಿನ್ ನೊಂದಿಗೆ ಇದ್ದಳು. ಪಾಕಿಸ್ತಾನದಿಂದ ಅಕ್ರಮವಾಗಿ ಬಂದಿದ್ದ ಈ ಮಹಿಳೆಯ ಬಗ್ಗೆ ವಿಚಾರ ತಿಳಿದು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಜಾಮೀನು ಪಡೆದು ಇದೀಗ ಹೊರಬಂದಿದ್ದಾರೆ.