alex Certify ಲಸಿಕೆ ಪಡೆದುಕೊಂಡ್ರೂ ಪಾಕಿಸ್ತಾನ ಅಧ್ಯಕ್ಷ ಆರೀಫ್ ಗೆ ಕೊರೋನಾ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಪಡೆದುಕೊಂಡ್ರೂ ಪಾಕಿಸ್ತಾನ ಅಧ್ಯಕ್ಷ ಆರೀಫ್ ಗೆ ಕೊರೋನಾ ಸೋಂಕು

ಇಸ್ಲಾಮಾಬಾದ್: ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಅಂದ ಹಾಗೆ, ಅವರು ಕೊರೋನಾ ಲಸಿಕೆ ಮೊದಲ ಡೋಸ್ ತೆಗೆದುಕೊಂಡ ನಂತರದಲ್ಲಿ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಾರ್ಚ್ 15 ರಂದು ಚೀನಾದ ಸೀನೋಫಾರ್ಮ್ ಲಸಿಕೆಯನ್ನು ಆರಿಫ್ ಪಡೆದುಕೊಂಡಿದ್ದಾರೆ. ಮಾರ್ಚ್ 29 ರಂದು ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಆರೀಫ್, ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ಎಲ್ಲಾ ಸೋಂಕಿತರು ಅಲ್ಲಾಹು ಕರುಣೆಯಿಂದ ಚೇತಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದೇನೆ. ಮತ್ತೊಂದು ಲಸಿಕೆ ಪಡೆದುಕೊಂಡಿದ್ದರೆ ರೋಗನಿರೋಧಕ ಶಕ್ತಿ ಬರುತ್ತಿತ್ತು ಎಂದು ಹೇಳಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾರ್ಚ್ 19 ರಂದು ಚೀನಾದ ಸೀನೋಫಾರ್ಮ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಆರೋಗ್ಯ ಘಟಕ ಸೀನೋಫಾರ್ಮ್ ಬಳಕೆಗೆ ಅನುಮೋದನೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...