ಬಂದೂಕುಧಾರಿಗಳಿಂದ ದಾಳಿಗೊಳಗಾದ ಪಾಕಿಸ್ತಾನದ ಮೊದಲ ಟ್ರಾನ್ಸ್ ಜೆಂಡರ್ ನಿರೂಪಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಾಕಿಸ್ತಾನದ ಮೊದಲ ಟ್ರಾನ್ಸ್ ಜೆಂಡರ್ ಸುದ್ದಿ ನಿರೂಪಕಿ ಮಾರ್ವಿಯಾ ಮಲಿಕ್ ಶುಕ್ರವಾರ ತನ್ನ ನಿವಾಸದ ಹೊರಗೆ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಒಳಗಾಗಿದ್ದರು. ಪಾಕಿಸ್ತಾನದ ಲಾಹೋರ್‌ನಲ್ಲಿರುವ ಫಾರ್ಮಸಿಯಿಂದ ಮನೆಗೆ ಮರಳುತ್ತಿದ್ದ ಮಲಿಕ್(26) ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪಾಕಿಸ್ತಾನದಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ತನಗೆ ಕೆಲವು ಸಮಯದಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮಲಿಕ್ ಪೊಲೀಸರಿಗೆ ತಿಳಿಸಿದ್ದರು.
ತನ್ನ ಕುಟುಂಬದಿಂದ ನಿರಾಕರಿಸಲ್ಪಟ್ಟ ನಂತರ 2018 ರಲ್ಲಿ ಮೊದಲ ಟ್ರಾನ್ಸ್ಜೆಂಡರ್ ಸುದ್ದಿ ನಿರೂಪಕರಾಗುವ ಮೂಲಕ ಮಲಿಕ್ ಮೂಲಕ ಇತಿಹಾಸ ನಿರ್ಮಿಸಿದರು.