ಟಿವಿ ಚಾನೆಲ್ಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳಿಗೆ ಬಿತ್ತು ಕತ್ತರಿ….! 23-10-2021 7:36PM IST / No Comments / Posted In: Latest News, Live News, International ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯೂಲೇಟರಿ ಅಥಾರಿಟಿ ಸ್ಥಳೀಯ ಟೆಲಿವಿಷನ್ ಚಾನೆಲ್ಗಳಿಗೆ ಆಲಿಂಗನ ಸೇರಿದಂತೆ ರೊಮ್ಯಾನ್ಸ್ ದೃಶ್ಯಗಳನ್ನು ಪ್ರಸಾರ ಮಾಡದಂತೆ ಸೂಚನೆ ನೀಡಿದೆ. ಟಿವಿಯಲ್ಲಿ ಪ್ರಸಾರವಾಗುವ ಕೆಲ ದೃಶ್ಯಗಳು ಸಭ್ಯತೆಯನ್ನು ಮೀರುತ್ತಿವೆ ಎಂದು ಹೇಳಲಾಗಿದೆ. ಭೂತದ ವೇಷದಲ್ಲಿ ಹೆದರಿಸಲು ಹೋಗಿ ಪ್ರಾಣ ಬಿಟ್ಟ ಯುವತಿ ಕಾಲ ಕಾಲಕ್ಕೆ ನೀಡಲಾಗುವ ಪ್ರಾಧಿಕಾರದ ನಿರ್ದೇಶನಗಳ ಮುಂದುವರಿದ ಭಾಗ ಇದಾಗಿದ್ದು ಸ್ಯಾಟಲೈಟ್ ಚಾನೆಲ್ಗಳು ಅಸಭ್ಯ ಡ್ರೆಸ್ಸಿಂಗ್, ರೊಮ್ಯಾನ್ಸ್ ದೃಶ್ಯಗಳನ್ನು ಪ್ರಸಾರ ಮಾಡುತ್ತಿವೆ ಎಂದು ತಿಳಿದುಬಂದಿದೆ. ಈ ಅನಗತ್ಯ ದೃಶ್ಯಗಳು ವೀಕ್ಷಕರಿಗೆ ಇರಿಸುಮುರಿಸು ಉಂಟು ಮಾಡುತ್ತಿದೆ. ಅಲ್ಲದೇ ಇದು ಸಭ್ಯ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ವಿವರಿಸಲಾಗಿದೆ. ಈ ದೃಶ್ಯಗಳು ಪಾಕಿಸ್ತಾನಿ ಸಮಾಜದ ನೈಜ ಚಿತ್ರಣಗಳನ್ನು ಬಿಂಬಿಸುತ್ತಿಲ್ಲ. ಅಪ್ಪುಗೆ, ಮುದ್ದಿಸುವ ದೃಶ್ಯಗಳು, ವಿವಾಹೇತರ ಸಂಬಂಧ, ಅಸಭ್ಯ ದಿರಿಸು, ವಿವಾಹಿತ ದಂಪತಿಯ ಅನಗತ್ಯ ರೊಮ್ಯಾನ್ಸ್ ಇವೆಲ್ಲವೂ ಇಸ್ಲಾಮಿಕ್ ಹಾಗೂ ಪಾಕ್ ಸಂಸ್ಕೃತಿಗೆ ಧಕ್ಕೆ ತರುತ್ತಿವೆ. ಹೀಗಾಗಿ ಈ ಎಲ್ಲಾ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚನೆ ನೀಡಲಾಗಿದೆ. “All Satellite TV channels are here h directed to refrain from airing caress/hug scenes” pic.twitter.com/ULAOfESZLf — Mirza Moiz Baig (@MoizBaig26) October 22, 2021