ಪಾಕಿಸ್ತಾನಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಬಹಳಷ್ಟು ಬಾರಿ ನಗೆಪಾಟಲಿಗೆ ದಾರಿ ಮಾಡಿಕೊಡುತ್ತಿವೆ. ಇಲ್ಲಿನ ಸುದ್ದಿ ಮಾಧ್ಯಮಗಳು, ಭಾಷಣಗಳು, ರಾಜಕಾರಣಿಗಳ ಸಾಕಷ್ಟು ವಿಡಿಯೋಗಳು ನಗೆ ತರಿಸುತ್ತವೆ. ಇದರಲ್ಲಿ ಹೆಚ್ಚಾಗಿ, ಸುದ್ದಿ ಬಿತ್ತರಿಸುವ ವಾಹಿನಿಗಳು ಕೆಲವೊಮ್ಮೆ ತಪ್ಪುಗಳಿಂದ ಮತ್ತು ಪೆದ್ದುತನದಿಂದ
ಕೂಡಿರುತ್ತದೆ.
2019 ರಲ್ಲಿ, ಪಾಕಿಸ್ತಾನದಲ್ಲಿ ಸುದ್ದಿವಾಚಕರೊಬ್ಬರು ಆಪಲ್ ಕಂಪನಿಯ ಉತ್ಪನ್ನಗಳನ್ನು ನೇರಪ್ರಸಾರದಲ್ಲಿ ಹಣ್ಣೆಂದು ಭಾವಿಸಿದ ವಿಡಿಯೋ ವೈರಲ್ ಅಗಿದ್ದನ್ನು ಇಲ್ಲಿ ಗಮನಿಸಬಹುದು. ಮತ್ತೊಮ್ಮೆ, ಪ್ರವಾಹ ವರದಿ ಮಾಡುತ್ತಿದ್ದ ವರದಿಗಾರನು, ಕುತ್ತಿಗೆ ತನಕ ಮುಳುಗಿ ಸುದ್ದಿ ಹೇಳುವಾಗ ಕಷ್ಟಕ್ಕೆ ಸಿಲುಕಿದ್ದರು.
ʼಹಿಟ್ ಮ್ಯಾನ್ʼ ರೋಹಿತ್ ಸೆಂಚುರಿ ಬೆನ್ನಲ್ಲೇ ಹಳೆ ಟ್ವೀಟ್ ವೈರಲ್
ಇತ್ತೀಚೆಗೆ ನಿದಾ ಯಾಸಿರ್ ಎಂಬ ಸುದ್ದಿವಾಚಕಿಯೊಬ್ಬಳ ಹಳೆಯ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದರಲ್ಲಿ ಈಕೆ ಸೂಟುಧಾರಿಗಳಿಗೆ ಫಾರ್ಮುಲಾ ಒನ್ ಕಾರ್ ರೇಸ್ ಬಗ್ಗೆ ಸಂದರ್ಶನ ಮಾಡುತ್ತಿದ್ದು, ಆಕೆಯ ಪ್ರಶ್ನೆಗಳು ನಗೆಪಾಟಲಿಗೊಳಗಾಗಿದೆ.
ಸಂದರ್ಶನ ವೇಳೆ ಎದುರಿಗಿದ್ದ ಸಂದರ್ಶನ ನೀಡುತ್ತಿದ್ದಾತ ಫಾರ್ಮುಲಾ ಒನ್ ಕಾರಿನಲ್ಲಿ ಒಂದೇ ಆಸನ ಇರುತ್ತದೆ ಎಂದು ಆಕೆಗೆ ಮನವರಿಕೆ ಮಾಡುತ್ತಿದ್ದಾನೆ. ಇದಕ್ಕೆ ಪ್ರತ್ಯುತ್ತರವಾಗಿ ನಿದಾ, ಹಾಗಿದ್ದಲ್ಲಿ ನಿಮ್ಮ ಕಂಪನಿಯು ಕೇವಲ ಒಂದೇ ಆಸನ ಇರುವ ಕಾರನ್ನು ತಯಾರಿಸಿದ್ದೀರಾ? ಎಂಬ ಪ್ರಶ್ನೆ ಕೇಳುತ್ತಾಳೆ. ಇದು ನೆಟ್ಟಿಗರನ್ನು ಸಾಕಷ್ಟು ನಗೆಯಲ್ಲಿ ಮುಳುಗಿಸಿದೆ.
ಇದು ಇಷ್ಟಕ್ಕೆ ನಿಲ್ಲದೆ, ಸಂದರ್ಶನ ನೀಡುತ್ತಿದ್ದಾತ ಆಕೆಗೆ ಮತ್ತಷ್ಟು ಅರ್ಥ ಮಾಡುತ್ತಿರುವಾಗ ಆಕೆ ಇದನ್ನು ವೈಜ್ಞಾನಿಕ ಫಾರ್ಮುಲಾ ಎಂದು ಭಾವಿಸಿದ್ದು, “ಹಾಗಿದ್ದಲ್ಲಿ ನೀವು ಇನ್ನು ಫಾರ್ಮುಲಾ ಕಂಡು ಹಿಡಿದಿಲ್ಲವೇ” ಎಂದಿದ್ದಾಳೆ. ಈಕೆಯ ಪ್ರಶ್ನೆಗಳಿಂದ ಸಾಮಾಜಿಕ ತಾಣಗಳಲ್ಲಿ ಆಕೆ ಟ್ರೋಲ್ ಆಗಿದ್ದಾಳೆ.