ತನ್ನ ಕುಟುಂಬಸ್ಥರೊಂದಿಗೆ ಜಗಳವಾಡಿಕೊಂಡ ಪಾಕಿಸ್ತಾನದ 15 ವರ್ಷದ ಬಾಲಕನೊಬ್ಬ ಭಾರತದ ಗಡಿ ದಾಟಿ ಬಂದುಬಿಟ್ಟಿದ್ದಾನೆ. ಗುಜರಾತ್‌ನ ಕಚ್ಛ್ ಜಿಲ್ಲೆಯ ಖವ್ಡಾ ಬಳಿ ಇರುವ ಅಂತಾರಾಷ್ಟ್ರೀಯ ಗಡಿ ಬಳಿ ಈ ಬಾಲಕನನ್ನು ವಶಕ್ಕೆ ಪಡೆದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಶಾಯ್ಚೋಕ್ ಪ್ರದೇಶದ ಈ ಬಾಲಕನ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆತ ಅಲ್ಲಿಗೆ ಹೇಗೆ ಬಂದ ಎಂದು ಪ್ರಶ್ನಿಸಿದಾಗ, ಕುಟುಂಬಸ್ಥರೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಓಡಿಬಂದಿರುವ ವಿಚಾರ ತಿಳಿದುಬಂದಿದೆ.
ಜೀವನದ ಜಂಜಾಟಗಳಿಂದ ಸುಸ್ತಾದವರಿಗೆ ನೆಮ್ಮದಿ ನೀಡಲಿದೆ ಈ ಗಿಡ
ಜುಲೈ 22ರಂದು ಪೂರ್ವದ ಗಡಿಯಲ್ಲಿ ಬಾಂಗ್ಲಾದೇಶದಿಂದ ಗಡಿ ದಾಟಿ ಓಡಿಬಂದಿದ್ದ 12 ವರ್ಷದ ಬಾಲಕನೊಬ್ಬ ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿರುವ ತನ್ನ ಅಜ್ಜನನ್ನು ಭೇಟಿ ಮಾಡಿದ್ದಾನೆ. ಬಳಿಕ ಆತನನ್ನು ಬಿಎಸ್‌ಎಫ್ ಯೋಧರು ಬಾಂಗ್ಲಾದೇಶದ ಬಾರ್ಡರ್ ಗಾರ್ಡ್‌ಗಳಿಗೆ ಹಸ್ತಾಂತರಿಸಿದ್ದಾರೆ.