ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶ ಕುಪ್ವಾರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಎರಡೂ ಕಡೆಯಿಂದಲೂ ಫೈರಿಂಗ್ ಮಾಡಲಾಗಿದೆ.
ಪಾಕಿಸ್ತಾನದ ಸೇನೆ ಶುಕ್ರವಾರ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಅಲ್ಲದೇ, ಫೈರಿಂಗ್ ನಲ್ಲಿ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಪಾಕಿಸ್ತಾನದ ದಾಳಿಯಲ್ಲಿ ನಾಗರಿಕರು, ಯೋಧರು ಸಾವನ್ನಪ್ಪಿದ್ದು, ಭಾರತೀಯ ಸೇನೆಯಿಂದ ಪ್ರತಿದಾಳಿ ನಡೆಸಲಾಗಿದೆ. ಪಾಕಿಸ್ತಾನ ಸೇನೆಯ 10 -12 ಯೋಧರನ್ನು ಹತ್ಯೆ ಮಾಡಲಾಗಿದೆ. ಭಾರತ ಸೇನೆಯ ಪ್ರತಿದಾಳಿಯಲ್ಲಿ ಪಾಕಿಸ್ತಾನದ 12 ಮಂದಿ ಯೋಧರು ಸಾವನ್ನಪ್ಪಿದ್ದಾರೆ.
ದಾಳಿಯಲ್ಲಿ ಪಾಕಿಸ್ತಾನ ಆರ್ಮಿಯ ಮೂವರು ಕಮಾಂಡರ್ ಗಳು ಕೂಡ ಸಾವನ್ನಪ್ಪಿದ್ದಾರೆ. ಗಡಿಯಲ್ಲಿ ಪಾಕಿಸ್ತಾನ ಸೇನೆಯ ಶಿಬಿರ ಮತ್ತು ಬಂಕರ್ ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಸಾವು-ನೋವಿನ ಬಗ್ಗೆ ಭಾರತೀಯ ಸೇನೆಯಿಂದ ಮಾಹಿತಿ ನೀಡಲಾಗಿದೆ.