alex Certify ಹಂಚಲು ತಂದಿದ್ದ ಗೋಧಿಯನ್ನೂ ಬಿಡಲಿಲ್ಲ ಪಾಕ್ ಅಧಿಕಾರಿಗಳು; 40 ಸಾವಿರ ಟನ್‌ ಆಹಾರ ಧಾನ್ಯಕ್ಕೆ ಕನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಂಚಲು ತಂದಿದ್ದ ಗೋಧಿಯನ್ನೂ ಬಿಡಲಿಲ್ಲ ಪಾಕ್ ಅಧಿಕಾರಿಗಳು; 40 ಸಾವಿರ ಟನ್‌ ಆಹಾರ ಧಾನ್ಯಕ್ಕೆ ಕನ್ನ

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಆಹಾರ ಪದಾರ್ಥಗಳ ಕೊರತೆ ಮಧ್ಯೆ ಅಧಿಕಾರಿಗಳು ಗೋಧಿ ಕದಿಯುತ್ತಿದ್ದಾರೆ.

ರಷ್ಯಾದಿಂದ ಸರಬರಾಜಾಗಿದ್ದ 40,000 ಟನ್ ಗೋಧಿಯನ್ನು ಸಿಂಧ್ ಪ್ರಾಂತ್ಯದಲ್ಲಿ ಕದ್ದ ಆರೋಪದ ಮೇಲೆ ಪಾಕಿಸ್ತಾನದ 67 ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಜೊತೆಗೆ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಪಾಕಿಸ್ತಾನದ ದೈನಿಕ ದಿ ನ್ಯೂಸ್‌ನ ವರದಿಯ ಪ್ರಕಾರ 10 ಜಿಲ್ಲೆಗಳಲ್ಲಿರುವ ಸರ್ಕಾರಿ ಗೋದಾಮುಗಳಿಂದ ಗೋಧಿಯನ್ನು ಕಳವು ಮಾಡಲಾಗಿದೆ.

ಅಮಾನತುಗೊಂಡ ಅಧಿಕಾರಿಗಳಲ್ಲಿ 49 ಆಹಾರ ಮೇಲ್ವಿಚಾರಕರು ಮತ್ತು 18 ಆಹಾರ ನಿರೀಕ್ಷಕರು ಸೇರಿದ್ದಾರೆ. ಅವರು ಲಾಜಿಸ್ಟಿಕ್ ಕೇಂದ್ರಗಳಲ್ಲಿ ಸಿಬ್ಬಂದಿಯ ಸಹಾಯದಿಂದ ಧಾನ್ಯವನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.

50,000 ಟನ್ ಗೋಧಿಯನ್ನು ಹೊತ್ತ ರಷ್ಯಾದ ಹಡಗು ಮಾರ್ಚ್ ಆರಂಭದಲ್ಲಿ ಪಾಕಿಸ್ತಾನದ ಗ್ವಾದರ್ ಬಂದರನ್ನು ತಲುಪಿತ್ತು. ಈ 50,000 ಟನ್‌ಗಳಲ್ಲಿ ಸುಮಾರು 40,392 ಟನ್‌ಗಳನ್ನು ಕಳ್ಳತನ ಮಾಡಲಾಗಿದೆ.

ದಾದು, ಲರ್ಕಾನಾ, ಶಹೀದ್ ಬೆನಜೀರಾಬಾದ್, ಕಂಬರ್-ಶಹದಾದ್ಕೋಟ್, ಜಾಕೋಬಾಬಾದ್, ಖೈರ್‌ಪುರ್, ಸುಕ್ಕೂರ್, ಘೋಟ್ಕಿ, ಸಂಘರ್ ಮತ್ತು ಮಿರ್‌ಪುರ್‌ಖಾಸ್ ಜಿಲ್ಲೆಗಳಲ್ಲಿನ ಗೋದಾಮುಗಳಿಂದ ಕಳ್ಳತನವಾಗಿದೆ.

ಸಿಂಧ್ ಆಹಾರ ಇಲಾಖೆಯು ಆರೋಪಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕಳುಹಿಸಿದ್ದು, ಅವರನ್ನು ಕೆಲಸದಿಂದ ಏಕೆ ವಜಾಗೊಳಿಸಬಾರದು ಎಂಬ ಬಗ್ಗೆ ತಮ್ಮ ನಿಲುವನ್ನು ವಿವರಿಸುವಂತೆ ಕೇಳಿದೆ.

ಮುಂಬರುವ ದಿನಗಳಲ್ಲಿ ಒಂಬತ್ತು ಸರಕು ಹಡಗುಗಳ ಮೂಲಕ ರಷ್ಯಾ 4,50,000 ಟನ್ ಗೋಧಿಯನ್ನು ಪಾಕಿಸ್ತಾನಕ್ಕೆ ಪೂರೈಸಲಿದೆ. ವರದಿಯೊಂದರ ಪ್ರಕಾರ, ಉಕ್ರೇನ್‌ನಿಂದ ಪೂರೈಕೆ ಅಡ್ಡಿಯಿಂದಾಗಿ ಪಾಕಿಸ್ತಾನಕ್ಕೆ ರಷ್ಯಾದ ಗೋಧಿ ಆಮದು ಎಂಟು ಪಟ್ಟು ಹೆಚ್ಚಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...