ಕರಾಚಿ: ಪಾಕಿಸ್ತಾನದ ಸಾಮಾಜಿಕ ಮಾಧ್ಯಮದ ಪ್ರಭಾವಿ ಯೂಟ್ಯೂಬರ್ ಅಜ್ಲಾನ್ ಷಾ ಅವರು ತಮ್ಮ ನವ ವಧು ವಾರಿಶಾಗೆ ವಿವಾಹದ ಉಡುಗೊರೆಯನ್ನು ನೀಡಿದ್ದಾರೆ. ಇದೀಗ ಭಾರಿ ವೈರಲ್ ಆಗಿದೆ.
ಇದಕ್ಕೆ ಕಾರಣ ಇವರು ನೀಡಿರುವುದು ಅಂತಿಂಥ ಉಡುಗೊರೆ ಅಲ್ಲ, ಬದಲಿಗೆ ಕತ್ತೆಮರಿ ! ಇದನ್ನು ನೋಡಿ ವಧು ಅಚ್ಚರಿಗೊಂಡಿದ್ದಾಳೆ. ನಂತರ ಇಬ್ಬರೂ ಸೇರಿ ಬಾಲಿವುಡ್ ಹಾಡಿಗೆ ನೃತ್ಯ ಮಾಡಿದ್ದಾರೆ.
ಅಷ್ಟಕ್ಕೂ ತಾನು ಕತ್ತೆಯನ್ನು ಏಕೆ ಉಡುಗೊರೆಯಾಗಿ ಕೊಟ್ಟೆ ಎಂಬ ಬಗ್ಗೆ ಅಜ್ಲಾನ್ ಷಾ ಹೇಳಿದ್ದಾರೆ. ನನಗೆ ಕತ್ತೆಗಳು ಎಂದರೆ ತುಂಬಾ ಇಷ್ಟ. ನನ್ನ ಮದುವೆಯಾಗುವವಳೂ ಅದನ್ನು ಇಷ್ಟಪಡುತ್ತಾಳೆ ಎನ್ನುವುದು ನನಗೆ ಗೊತ್ತು, ಅದಕ್ಕಾಗಿ ಕೊಟ್ಟೆ ಎಂದಿದ್ದಾರೆ. ಅಂದಹಾಗೆ ಅಜ್ಲಾನ್ ಮದುವೆಯಾಗಿರುವುದು ವಾರಿಶಾ ಜಾವೇದ್ ಎಂಬ ಯುವತಿಯನ್ನು.