ಪ್ರಧಾನಿ ಮೋದಿ ಅವರು ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಮೇ 22 ರಿಂದ ಮೇ 24 ರವರೆಗೆ ಆಸ್ಟ್ರೇಲಿಯಾದಲ್ಲಿದ್ದರು. ಸಿಡ್ನಿಯಲ್ಲಿ ನಡೆದ ಸಮುದಾಯದ ಕಾರ್ಯಕ್ರಮವೊಂದರಲ್ಲಿ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ʼದಿ ಬಾಸ್ʼ ಎಂದು ಉಲ್ಲೇಖಿಸಿದ್ದಾರೆ.
ಹೌದು, ಇಷ್ಟೇ ಅಲ್ಲ ಸಿಡ್ನಿ ಬಂದರಿನ ಸೇತುವೆಯ ಮೇಲೆ ಭಾರತದ ಧ್ವಜ ರಾರಾಜಿಸುತ್ತಿತ್ತು. ಇದನ್ನು ಚಿತ್ರೀಕರಿಸಿದ ಪಾಕಿಸ್ತಾನಿ ಪ್ರಜೆಯೊಬ್ಬರು, ನಾವು (ಪಾಕಿಸ್ತಾನ) ಭಾರತವನ್ನು ನಮ್ಮೊಂದಿಗೆ ಹೋಲಿಸುತ್ತೇವೆ. ಆದರೆ, ನಾವು ನಮ್ಮ ಪರಿಸ್ಥಿತಿ ಮತ್ತು ಭಾರತದ ಪರಿಸ್ಥಿತಿಯನ್ನು ನೋಡಬೇಕಾಗಿದೆ. ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ಸರ್ಕಾರವು ತಮ್ಮ ದೇಶದ ಬಗ್ಗೆ ಯೋಚಿಸಬೇಕಾಗಿದೆ. ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಇತ್ತೀಚೆಗೆ ಭಾರತೀಯ ಪ್ರಧಾನಿಯನ್ನು ಬಾಸ್ ಎಂದು ಕರೆದಿದ್ದಾರೆ ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ಆದಿತ್ಯ ರಾಜ್ ಕೌಲ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಟನ್ ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.