
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಎಲ್ಇಟಿ ಕಮಾಂಡರ್ ಸೇರಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಪುಲ್ವಾಮಾದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಪಾಕಿಸ್ತಾನದ ಎಲ್ಇಟಿ ಕಮಾಂಡರ್ ಪಾಕಿಸ್ತಾನದ ಎಲ್ಇಟಿ ಕಮಾಂಡರ್ ಐಜಾಜ್ ಅಲಿಯಾಸ್ ಅಬು ಹುರೈರಾ ಸೇರಿದಂತೆ ಮೂವರು ಉಗ್ರರು ಹತ್ಯೆಯಾಗಿದ್ದಾರೆ.
ಕಾಶ್ಮೀರ ಐಜಿಪಿ ಈ ಬಗ್ಗೆ ಮಾಹಿತಿ ನೀಡಿ, ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಎಲ್ಇಟಿ ಕಮಾಂಡರ್ ಐಜಾಜ್ ಅಲಿಯಾಸ್ ಅಬು ಹುರೈರಾನೊಂದಿಗೆ 2 ಸ್ಥಳೀಯ ಭಯೋತ್ಪಾದಕರು ಕೂಡ ಕೊಲ್ಲಲ್ಪಟ್ಟರು ಎಂದು ತಿಳಿಸಿದ್ದಾರೆ.