ಮನಬಂದಂತೆ ಗುಂಡು ಹಾರಿಸಿದ ವಕೀಲ….! ಪಾಕಿಸ್ತಾನದಲ್ಲಿ ಮಾತ್ರ ಇಂಥದ್ದೆಲ್ಲಾ ಸಾಧ್ಯ 16-01-2023 8:43PM IST / No Comments / Posted In: Latest News, Live News, International ಆರ್ಥಿಕವಾಗಿ ಕಂಗೆಟ್ಟಿರುವ ಪಾಕ್ ಕಂಡೀಶನ್ ದಿನದಿಂದ ದಿನಕ್ಕೆ ಕ್ರಿಟಿಕಲ್ ಆಗ್ತಿದೆ. ಅಲ್ಲಿನ ಜನ ಒಂದು ಹೊತ್ತಿನ ಊಟಕ್ಕೂ ಪರದಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಂತಹದ್ದೇ ವಿಡಿಯೋಗಳು ಈಗ ವೈರಲ್ ಆಗಿವೆ. ಈಗ ಅದೇ ಪಾಕಿಸ್ತಾನದ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಪಾಕ್‌ನಲ್ಲಿ ನಡೆಯುತ್ತಿರೋ ಹುಚ್ಚಾಟಕ್ಕೆ ಹಿಡಿದ ಕನ್ನಡಿಯಾಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ, ವಕೀಲನೊಬ್ಬ ನಟ್ಟ ನಡುರಸ್ತೆಯಲ್ಲಿ, AK-47ಗನ್ ಹಿಡಿದು ಕಂಡ ಕಂಡಲ್ಲಿ ಗುಂಡು ಹಾರಿಸುತ್ತಿದ್ದಾನೆ. ಆತ ಹಾಗೆ ಗುಂಡು ಹಾರಿಸ್ತಿರೋದು ಯಾರನ್ನೋ ಕೊಂದು ಹಾಕೋದಕ್ಕಲ್ಲ. ಬದಲಾಗಿ ಲಾಹೋರ್ ಬಾರ್ ಕೌನ್ಸಿಲ್ ಎಲೆಕ್ಷನ್‌ನಲ್ಲಿ ಗೆದ್ದಿದ್ದಕ್ಕಾಗಿ, ಈ ವಿಡಿಯೋ ನೋಡಿದವರೆಲ್ಲ ಇದು ಹುಚ್ಚಾಟದ ಪರಮಾವಧಿ ಎಂದು ಹೇಳುತ್ತಿದ್ದಾರೆ. ಈತ ಮಾಡಿರೋ ಕೆಲಸ ನೋಡಿ ನೆಟ್ಟಿಗರು ಉಗೀತಾ ಇದ್ದಾರೆ. ಅಷ್ಟೆಅಲ್ಲ ಸಾರ್ವಜನಿಕವಾಗಿ ಈ ರೀತಿ ಶಸ್ತ್ರಾಸ್ತ್ರಗಳನ್ನ ಬಳಸಬಹುದಾ ಅನ್ನೋ ಪ್ರಶ್ನೆ ಕೇಳ್ತಾ ಇದ್ದಾರೆ. ಈ ವಿಡಿಯೋವನ್ನ ದನ್ವೀರ್ ಸಿಂಗ್ ಎಂಬವರು ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ‘ಪಾಕಿಸ್ತಾನದ ಭೂಮಿಯೋ ಅಥವಾ ಭಯೋತ್ಪಾದಕರ ದೇಶವೋ ? ಇದು ಲಾಹೋರ್ ಬಾರ್ ಚುನಾವಣೆಯ ದೃಶ್ಯ. ಇದೇ ದೃಶ್ಯದಲ್ಲಿ ಇದೆ ಉತ್ತರ..! ಪಾಕ್ ವಕೀಲರು ಪುಂಡಾಟ ನೋಡಿ, ಉಗ್ರನಂತೆ ಕಂಡ ಕಂಡಲ್ಲಿ AK-47 ಗುಂಡು ಹಾರಿಸ್ತಿರೋದೇ ಸಾಕ್ಷಿಯಾಗಿದೆ. ಆದರೂ ಪಾಕಿಸ್ತಾನಿ ಸಮಾಜವೂ ಹಫೀಜ್ ಸಯೀದ್ ನ್ನ ಪರೋಪಕಾರಿ ಎಂದು ಪರಿಗಣಿಸುತ್ತೆ. ಇದರಲ್ಲಿ ಅದೇನು ಅರ್ಥವಿದೆಯೋ ಏನೋ’ ಎಂದು ಬರೆದಿದ್ದಾರೆ. ಸದ್ಯಕ್ಕೆ ಪಾಕ್ ಸರ್ಕಾರಕ್ಕೆ ಈ ದೃಶ್ಯ ಗಮನಕ್ಕೆ ಬರ್ತಿದ್ದ ಹಾಗೆಯೇ, ವಕೀಲನ ಹೆಸರು ಉಮರ್‌ಫೌರಿ ಎಂದು ಗುರುತಿಸಲಾಗಿದೆ. ಈಗ ಈತನ ವಿರುದ್ಧ ಲಾಹೋರ್ ಇಸ್ಲಾಂಪುರ್ ಪೊಲೀಸ್ ಠಾಣೆಯಲ್ಲಿ, ಎಫ್ಐಆರ್ ದಾಖಲು ಮಾಡಲಾಗಿದೆ. ಹೀಗೆ ಗಾಳಿಯಲ್ಲಿ ಗುಂಡು ಹಾರಿಸಿದ್ದಕ್ಕಾಗಿ ಜನರು ಭಯಭೀತರಾಗಿದ್ದಾರೆ. ಅಷ್ಟೆ ಅಲ್ಲ ಗುಂಡಿನ ಸದ್ದಿನಿಂದಾಗಿ ಇದು ಉಗ್ರರ ದಾಳಿ ಇರಬಹುದು ಅಂತ ನೂರಾರು ಜನ ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಪಾಕ್ ವಕೀಲ ಮಾಡಿದ್ದ ಈ ಕೃತ್ಯವನ್ನ ಖಂಡಿಸಿದ್ದಾರೆ. PAKISTAN the land of pur or the land of the terrorists ? Answer is in these scenes that are from the Lahore Bar Elections! If lawyers are armed with AK 47 and then it is not difficult to understand why Pakistani Society considers Hafiz Sayed a philanthropist. pic.twitter.com/H9Q9f0wa18 — कर्नल Danvir Singh, Sena Medal Gallantry (@danvir_chauhan) January 16, 2023