ಇತ್ತೀಚಿನ ದಿನಗಳಲ್ಲಿ ಕಿರಿಯರ ಸಾವು ಹೆಚ್ಚಾಗ್ತಿದೆ. ಜನರ ಜೀವಿತಾವಧಿ ಕಡಿಮೆಯಾಗ್ತಿದೆ. 30 ವರ್ಷದ ನಂತ್ರ ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗ್ತಿದೆ. ಮಹಿಳೆಯರ ಸಂತಾನೋತ್ಪತ್ತಿಯಲ್ಲೂ ಸಮಸ್ಯೆ ಕಾಣಿಸಿಕೊಳ್ತಿದೆ.
ಆದ್ರೆ ಪಾಕಿಸ್ತಾನದ ಬುರುಶೋ ಸಮುದಾಯದವರು ಮಾತ್ರ ಇದೆಲ್ಲ ಸಮಸ್ಯೆಯಿಂದ ಮುಕ್ತವಾಗಿದ್ದಾರೆ. ಅವರ ಜೀವನಶೈಲಿ, ವಯಸ್ಸಾಗಿದ್ದನ್ನು ಮರೆ ಮಾಚುತ್ತಿದೆ. ಇಷ್ಟೇ ಅಲ್ಲ 100 ವರ್ಷಗಳಿಗಿಂತ ಹೆಚ್ಚು ಕಾಲ ಜೀವಿಸುತ್ತಿರುವ ಅವರು, ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ.
ಪಾಕಿಸ್ತಾನ ಈ ಸಮುದಾಯದ ಜನರು ಮುಸ್ಲಿಂ ಧರ್ಮವನ್ನು ಅನುಸರಿಸುತ್ತಾರೆ. ಅವರ ಸಮುದಾಯವನ್ನು ಬುರುಶೋ ಎಂದು ಕರೆಯಲಾಗುತ್ತದೆ. ಅವರು ಬುರುಶಾಸ್ಕಿ ಭಾಷೆಯನ್ನು ಮಾತನಾಡುತ್ತಾರೆ.
ಉತ್ತರ ಪಾಕಿಸ್ತಾನದ ಹುಂಜಾ ಕಣಿವೆಯಲ್ಲಿ ವಾಸಿಸುವ ಈ ಜನರ ದೀರ್ಘಾಯಸ್ಸು ಹಾಗೂ ಆರೋಗ್ಯದ ಬಗ್ಗೆ ಕೆಲ ಸಂಶೋಧನೆ ಕೂಡ ನಡೆದಿದೆ. ಈ ಸಮುದಾಯದ ಮಹಿಳೆಯರ ಸೌಂದರ್ಯ ಎಲ್ಲರನ್ನು ಸೆಳೆಯುತ್ತದೆ. ಅವರ ಸೌಂದರ್ಯ ಅವರ ವಯಸ್ಸನ್ನು ಮರೆಮಾಚುತ್ತಿದೆ. 80ರ ಹರೆಯದಲ್ಲೂ ಅವರು ಸಾಕಷ್ಟು ಚಿಕ್ಕವರಾಗಿ ಕಾಣಸುತ್ತಾರೆ. 65-70 ವರ್ಷದಲ್ಲೂ ಮಕ್ಕಳಿಗೆ ಜನ್ಮ ನೀಡುವ ಸಾಮರ್ಥ್ಯ ಹೊಂದಿದ್ದಾರೆ.
ವ್ಯಕ್ತಿಯೊಬ್ಬ ಬ್ರಿಟನ್ ಗೆ ಹೋಗಲು ವೀಸಾಕ್ಕೆ ಅರ್ಜಿ ಸಲ್ಲಿಸಿದ್ದ. ಅದ್ರಲ್ಲಿದ್ದ ಆತನ ಹುಟ್ಟಿದ ದಿನಾಂಕ ಎಲ್ಲರ ಗಮನ ಸೆಳೆದಿತ್ತು. ನಂತ್ರ ಈ ಜನಾಂಗದ ಬಗ್ಗೆ ಸಂಶೋಧನೆ ನಡೆಯಿತು. ವ್ಯಕ್ತಿ 1984 ರಲ್ಲಿ ಅರ್ಜಿ ಸಲ್ಲಿಸಿದ್ದ. ಹುಟ್ಟಿದ ದಿನಾಂಕ 1832 ಎಂದಿತ್ತು.
ಇಲ್ಲಿನ ಇನ್ನೊಂದು ವಿಶೇಷವೆಂದ್ರೆ ಇಲ್ಲಿನ ಮಹಿಳೆಯರಿಗೆ ಪುರುಷರಂತೆ ಶಿಕ್ಷಣ ನೀಡಲಾಗುತ್ತದೆ. ಮಹಿಳೆಯರ ಸೌಂದರ್ಯ ಹಾಗೂ ಆರೋಗ್ಯದ ಗುಟ್ಟನ್ನೂ ಸಂಶೋಧನೆಯಲ್ಲಿ ಹೇಳಲಾಗಿದೆ. ಹಿಮಾಲಯದ ಹಿಮನದಿಗಳಿಂದ ಕರಗಿದ ನೀರನ್ನು ಮಹಿಳೆಯರು ಕುಡಿಯುತ್ತಾರೆ. ಅದೇ ನೀರಿನಲ್ಲಿ ಸ್ನಾನ ಮಾಡ್ತಾರೆ. ಈ ನೀರು ಬಹಳಷ್ಟು ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದೇ ಇಲ್ಲಿನವರ ಸೌಂದರ್ಯದ ಗುಟ್ಟು ಎನ್ನಲಾಗುತ್ತದೆ.