alex Certify ಮೆಹಂದಿ ಸಮಾರಂಭದಲ್ಲಿ LED ಲೆಹೆಂಗಾ ಧರಿಸಿದ ವಧು: ವಿಡಿಯೋ ನೋಡಿ ನೆಟ್ಟಿಗರು ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಹಂದಿ ಸಮಾರಂಭದಲ್ಲಿ LED ಲೆಹೆಂಗಾ ಧರಿಸಿದ ವಧು: ವಿಡಿಯೋ ನೋಡಿ ನೆಟ್ಟಿಗರು ಶಾಕ್

ಪ್ರೀತಿ ಮಾಯೆಯಿದ್ದಂತೆ. ಅದು ನಮ್ಮಿಂದ ಯಾವ ಕೆಲಸ ಬೇಕಿದ್ರೂ ಮಾಡಿಸುತ್ತೆ ಅನ್ನೋದಕ್ಕೆ ಸಾಕ್ಷಿ ಸಾಕಷ್ಟು ಸಿಗುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂಥ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಅಂದಹಾಗೆ ಪಾಕಿಸ್ತಾನದಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ.

ಮದುವೆ ಸಂಭ್ರಮದಲ್ಲಿ ನೀನೇ ಮಿಂಚಬೇಕು ಎಂದು ವರ ಹೇಳಿದ್ದ ಮಾತನ್ನೇ ಗಂಭೀರವಾಗಿ ತೆಗೆದುಕೊಂಡ ವಧುವು ಎಲ್​ಇಡಿ ಲೈಟ್​ನಿಂದ ಮಾಡಲಾದ ಲೆಹೆಂಗಾ ಧರಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. ರೆಹಬ್​ ಡೇನಿಯಲ್ ತಮ್ಮ ಮದುವೆ ಸಂಭ್ರಮದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ.

ಕಲರ್​​ಫುಲ್​ ಎಲ್​ಇಡಿ ಲೈಟ್​​ಗಳಿಂದ ಲೆಹೆಂಗಾ ಧರಿಸಿ ಪತಿಯೊಂದಿಗೆ ವಧು ಎಂಟ್ರಿಕೊಡುತ್ತಿರೋ ವಿಡಿಯೋ ಇದಾಗಿದೆ. ರೆಹಬ್​ ತನ್ನ ಮೆಹಂದಿ ಸಮಾರಂಭದಲ್ಲಿ ಈ ರೀತಿಯ ಡಿಫರೆಂಟ್​ ಲೆಹೆಂಗಾ ಧರಿಸೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಅಂದಹಾಗೆ ವಧುವಿನ ಈ ಡ್ರೆಸ್​ನ್ನು ಸ್ವತಃ ಆಕೆಯ ಪತಿಯೇ ಡಿಸೈನ್​ ವಿನ್ಯಾಸಗೊಳಿಸಿದ್ದಾರೆ ಎನ್ನಲಾಗಿದೆ. ನಮ್ಮ ಮದುವೆ ಸಮಾರಂಭದಲ್ಲಿ ಪ್ರಕಾಶಮಾನವಾಗಿ ಬೆಳಗಬೇಕು ಅನ್ನೋದು ನನ್ನ ಪತಿಯ ಬಯಕೆಯಾಗಿತ್ತು. ಈ ಡ್ರೆಸ್​ನ್ನು ಧರಿಸಿದ್ರೆ ಜನ ನಿನಗೆ ಗೇಲಿ ಮಾಡ್ತಾರೆ ಅಂತಾ ಅನೇಕರು ನನಗೆ ಹೇಳಿದ್ರು. ಆದರೆ ನನಗೆ ಈ ಡ್ರೆಸ್​ ಧರಿಸಲು ಹೆಮ್ಮೆಯಿದೆ. ಏಕೆಂದರೆ ಈವರೆಗೆ ಯಾವುದೇ ವರನು ತನ್ನ ವಧುವಿಗಾಗಿ ಈ ರೀತಿಯ ಪ್ರಯತ್ನ ಮಾಡಿರಲು ಸಾಧ್ಯವೇ ಇಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ವಧು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...