ಪಾಕಿಸ್ತಾನದ ಇಸ್ಲಾಮಾಬಾದ್‌ನ ದಂಪತಿ ತಮ್ಮ ಪ್ರೀತಿಯ ಆರಂಭಿಕ ದಿನಗಳಲ್ಲಿ ಪರಸ್ಪರ ಕಳುಹಿಸಿದ ವಾಟ್ಸಾಪ್ ಸಂದೇಶಗಳ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪೋಸ್ಟ್ ಅನ್ನು ದಿ ಅಫಾನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಂದೇಶಗಳ ಸ್ಕ್ರೀನ್‌ಶಾಟ್ ಮತ್ತು ದಂಪತಿ ಮಾಡಿರುವ ಚಾಟ್ನ ಹಚ್ಚೆಗಳ ಫೋಟೋವನ್ನು ಒಳಗೊಂಡಿದೆ.
ನಾನು ನಿಮಗೆ ಹತ್ತಿರವಾಗಿದ್ದೇನೆ ಎಂದು ಎನ್ನಿಸುತ್ತಿದೆ ಎಂದು ಯುವತಿ ಹೇಳಿದರೆ, ಯುವಕ ನಾನು ನಿನ್ನನ್ನು ತಬ್ಬಿಕೊಳ್ಳಲು ಇನ್ನಷ್ಟು ಕಾಯಲು ಸಾಧ್ಯವಿಲ್ಲ ಎಂದಿದ್ದಾನೆ. ತಬ್ಬಿಕೊಳ್ಳುವುದು ಉಸಿರಾಡುವಷ್ಟು ಸುಲಭ ಎಂದು ಆಕೆ ಉತ್ತರಿಸಿದ್ದಾಳೆ, ಈ ಸಂದೇಶಗಳ ಟ್ಯಾಟೂ ಹಾಕಿಸಿಕೊಳ್ಳಲಾಗಿದೆ.
ನಮ್ಮ ಪ್ರೀತಿ ಹೇಗೆ ಶುರುವಾಯಿತು ಎಂದು ತಿಳಿದಿಲ್ಲ. ಇದು ಕಲ್ಪನೆಯಂತೆ ತೋರುತ್ತಿದೆ. ಇವುಗಳನ್ನು ಹಚ್ಚೆ ಹಾಕಿಸಿಕೊಂಡು ಪ್ರದರ್ಶನ ಮಾಡಲು ನಾಚಿಕೆಯಾಗುತ್ತಿದೆ. ಆದರೂ ನಮ್ಮ ಪ್ರೀತಿಯನ್ನು ಎಲ್ಲರಿಗೂ ತೋರ್ಪಡಿಸಲು ವಿಭಿನ್ನ ರೀತಿಯ ಮಾರ್ಗವನ್ನು ಕಂಡುಕೊಂಡಿದ್ದೇವೆ ಎಂದು ದಂಪತಿ ಹೇಳಿಕೊಂಡಿದ್ದಾರೆ.
ಇದಕ್ಕೆ ಪರ-ವಿರೋಧದ ಕಮೆಂಟ್ಗಳು ಬರುತ್ತಿವೆ. ಕೆಲವರು ಪ್ರೀತಿಯ ಶುರು ಆಗಿರುವುದು ಕುತೂಹಲಕರವಾಗಿದ್ದು ಎಂದರೆ, ಪ್ರೀತಿ ನಿಜವೇ ಆಗಿದ್ದರೆ ಇಂಥ ತೋರ್ಪಡಿಕೆಗಳೆಲ್ಲಾ ಏಕೆ ಎಂದು ಹಲವರು ಪ್ರಶ್ನಿಸಿದ್ದಾರೆ.
https://twitter.com/Affanarchist/status/1629119293785874432?ref_src=twsrc%5Etfw%7Ctwcamp%5Etweetembed%7Ctwterm%5E1629119293785874432%7Ctwgr%5Ecfe60090db72d8ace15dfd65ee712953aab6e863%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fpakistani-couple-get-tattoos-of-whatsapp-messages-they-sent-to-each-other-internet-calls-it-wholesome-3824181