ಇಸ್ಲಾಮಾಬಾದ್: ತಮ್ಮ ಮದುವೆಯಲ್ಲಿ ಸುಂದರವಾಗಿ ಕಾಣಿಸಿಕೊಳ್ಳಬೇಕು ಅಂತಾ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೂ ಆಸೆಯಿರುತ್ತೆ. ಅದರಲ್ಲೂ ಸೀರೆ ಅಥವಾ ಲೆಹೆಂಗಾ ಇಂಥದ್ದೇ ಬಣ್ಣ ಬೇಕು, ಇದೇ ತರಹ ಡಿಸೈನ್ ಬೇಕು ಅಂತೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬಳು ಯುವತಿ ತನ್ನ ಮದುವೆ ದಿನ ಮಾಡಿದ್ದೇನು ಗೊತ್ತಾ..?
ಮದುವೆ ದಿನ ಎಷ್ಟೇ ಚೆನ್ನಾಗಿ ಅಲಂಕಾರ ಮಾಡಿಕೊಂಡರೂ ಕೂಡ ಧರಿಸಿರುವ ಉಡುಪು, ಜ್ಯುವೆಲ್ಲರಿಯಿಂದ ಮದುಮಗಳು ಸುಸ್ತಾಗಿರುತ್ತಾರೆ. ಇನ್ನೂ ಕೆಲವರಿಗೆ ಒಮ್ಮೆ ಮದುವೆ ಮುಗಿದರೆ ಸಾಕಪ್ಪಾ ಅಂತಾ ಅನಿಸಿರುತ್ತೆ. ಅಂಥಾದ್ರಲ್ಲಿ ಪಾಕಿಸ್ತಾನದ ವಧುವೊಬ್ಬಳು ಬರೋಬ್ಬರಿ 100 ಕೆ.ಜಿಯ ಲೆಹೆಂಗಾ ಧರಿಸಿ ಸುದ್ದಿಯಾಗಿದ್ದಾಳೆ. ವೇದಿಕೆ ತುಂಬೆಲ್ಲಾ ಲೆಹೆಂಗಾ ಹರಡಿಕೊಂಡಿದೆ. ವಧುವಿನ ಈ ವಿಡಿಯೋ ನೋಡಿದ ನೆಟ್ಟಿಗರು ವ್ಹಾವ್ ಅಂದಿದ್ದಾರೆ. ವಧುವು ಕೈ ಕಸೂತಿಯಿಂದ ಅಲಂಕರಿಸಲ್ಪಟ್ಟ ಸುಂದರವಾದ ದೈತ್ಯ ಲೆಹೆಂಗಾವನ್ನು ಧರಿಸಿದ್ದಳು. ಮದುವೆಗೆ ಆಗಮಿಸಿದವರ ಕಣ್ಣುಗಳೆಲ್ಲಾ ವಧು ಧರಿಸಿದ್ದ ಲೆಹೆಂಗಾ ಮೇಲೆಯೇ ಇತ್ತು.
BIG BREAKING: ರಾಜ್ಯದಲ್ಲಿ ಕೊರೋನಾ ಮತ್ತೆ ಏರಿಕೆ, ಇಲ್ಲಿದೆ ಜಿಲ್ಲಾವಾರು ಮಾಹಿತಿ
ಇನ್ನು ವರ ಸರಳವಾದ ಚಿನ್ನದ ಬಣ್ಣದ ಶೆರ್ವಾನಿ ಹಾಗೂ ಕೆಂಪು ಬಣ್ಣದ ಪೇಟವನ್ನು ಅಲಂಕರಿಸಿಕೊಂಡಿದ್ದಾನೆ. ವಧುವಿನ ಲೆಹೆಂಗಾದ ಸ್ಕರ್ಟ್ ಬಹಳ ಉದ್ದ ಹಾಗೂ ದೊಡ್ಡದಾಗಿದೆ. ವೇದಿಕೆ ತುಂಬಾ ವಧುವಿನ ಸ್ಕರ್ಟ್ ಹರಡಿಕೊಂಡಿದೆ. ಅಲ್ಲದೆ ತನ್ನ ಸುಂದರವಾದ ಲೆಹೆಂಗಾಗೆ ತಕ್ಕಂತೆ ಜುವೆಲ್ಲರಿಯನ್ನು ಕೂಡ ಧರಿಸಿದ್ದಾಳೆ.
ಆದರೆ ಇದೇ ಎಂದು ಹೇಳಲಾದ ವಿಡಿಯೋ ಕಳೆದ ವರ್ಷವೂ ವೈರಲ್ ಆಗಿತ್ತು ಎನ್ನಲಾಗಿದೆ. ಕೆಲವರು ವಧುವಿನ ಉಡುಪನ್ನು ಇಷ್ಟಪಟ್ಟರೆ ಇನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ಸದ್ಯ ಮತ್ತೆ ಈ ವಿಡಿಯೋ ಭಾರಿ ವೈರಲ್ ಆಗಿದೆ.