ಪಾಕಿಸ್ತಾನದ ಸ್ಟೇಜ್ ಕಲಾವಿದ ಅಬುಜರ್ ರನ್ನು ಲಾಹೋರ್ ಪೊಲೀಸರು ಬಂಧಿಸಿದ್ದಾರೆ. ಬೆಳಗ್ಗಿನ ಜಾವ ಆಟೋರಿಕ್ಷಾಗಾಗಿ ಕಾಯುತ್ತಿದ್ದ ಅವರನ್ನು ಇದ್ದಕ್ಕಿದ್ದಂತೆ ಬಂದ ಪೊಲೀಸರು ಬಂಧಿಸಿ ಠಾಣೆಗೆ ಎಳೆದೊಯ್ದಿದ್ದಾರೆ.
ಇಷ್ಟಕ್ಕೂ ಬಂಧನವಾಗುವಂಥದ್ದನ್ನು ಅವರು ಏನು ಮಾಡಿದ್ದರು ಎಂದು ಕೆಲವರು ಕೇಳಬಹುದು. ಉದ್ದನೆಯ ಕೂದಲು ಬಿಟ್ಟಿದ್ದೇ ಆತ ಮಾಡಿದ ಅಪರಾಧವಾಗಿದೆ ನೋಡಿ…! ಅಬುಜರ್ ರನ್ನು ಅವರ ಬ್ಯಾಗುಗಳೊಂದಿಗೆ ಠಾಣೆಗೆ ಕೊಂಡೊಯ್ಯಲಾಗಿದೆ.
ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
ಉದ್ದನೆಯ ಕೂದಲಿನೊಂದಿಗೆ ಕೈಗೆ ಬಳೆಯೊಂದನ್ನು ತೊಟ್ಟಿದ್ದಕ್ಕೇ ಆತನನ್ನು ಶಂಕಿಸಿ ನೋಡಿದ್ದಾರೆ ಲಾಹೋರ್ ಪೊಲೀಸರು.
ಅಬುಜರ್ ಬಂಧನವನ್ನು ಪ್ರಶ್ನಿಸಿದ ಸ್ಥಳೀಯ ಕಾರ್ಯಕರ್ತೆ ಆಲಿಯಾ ಹೈದರ್, “ಕಲಾವಿದ ಅಬುಜರ್ ಮಧುರನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿದ್ದಾರೆ ಏಕೆಂದರೆ ಅವರು ಲಾಹೋರ್ನ ಬೀದಿಯಲ್ಲಿ ನಡೆದಾಡಿಕೊಂಡು ಹೋಗುತ್ತಿದ್ದರು. ಅವರ ಮೇಲೆ ಶಂಕೆಯಿಂದ ಚೀಲಗಳನ್ನೆಲ್ಲಾ ಪರಿಶೀಲಿಸಿ ನೋಡಲಾಗಿದೆ. ಅವರನ್ನು ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಶ್ರೀಮಂತ ಸಂಸ್ಕೃತಿಯ ʼನೇಪಾಳʼದ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು…!
ಆಲಿಯಾರ ಈ ಟ್ವೀಟ್ ಪಾಕಿಸ್ತಾನದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ವೈರಲ್ ಆಗಿದೆ. ಸಿಟ್ಟುಗೊಂಡ ನೆಟ್ಟಿಗರು, ಪೊಲೀಸ್ ವ್ಯವಸ್ಥೆ ವಿರುದ್ಧ ಅಸಮಾಧಾನ ಕಾರಿಕೊಂಡಿದ್ದಾರೆ.