ಕರಾಚಿ: ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಿದೆ, ಇದು ವಿಚ್ಛೇದನದವರೆಗೆ ಹೋಗಿದೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಆದರೆ ಇವರ ದಾಂಪತ್ಯಕ್ಕೆ ಹುಳಿ ಹಿಂಡಿದ್ದು ಪಾಕಿಸ್ತಾನದ ಮಾಡೆಲ್ ಕಮ್ ನಟಿ ಆಯೇಷಾ ಓಮರ್ ಎಂಬ ಸುದ್ದಿ ಈಗ ಹರಿದಾಡುತ್ತಿದೆ.
“ಹೃದಯ ಒಡೆದು ಹೋದ ಬಳಿಕ ಎಲ್ಲಿಗೆ ಹೋಗಬೇಕು? ಅಲ್ಲಾನ ಹುಡುಕಲು ಹೋಗಬೇಕೆ?” ಎಂದು ಕೆಲ ದಿನಗಳ ಹಿಂದೆ ಸಾನಿಯಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ನಂತರ ಮಗ ಇಝ್ಹಾನ್ ಮಿರ್ಜಾ ಮಲಿಕ್ ಜತೆಗಿನ ಫೋಟೊ ಶೇರ್ ಮಾಡಿ “ನನ್ನ ಕಠಿಣ ದಿನಗಳನ್ನು ಕಳೆಯುವ ಕ್ಷಣಗಳಿವು” ಎಂದು ನೋವು ವ್ಯಕ್ತಪಡಿಸಿದ್ದರು. ಇದರ ಬಳಿಕ ದಾಂಪತ್ಯದ ಬಿರುಕಿನ ಸುದ್ದಿಯಾಗಿತ್ತು.
ಇದರ ನಡುವೆ ಈಗ ಮಾಡೆಲ್ ಆಯೇಷಾ ಓಮರ್ ಹೆಸರು ಮುನ್ನೆಲೆಗೆ ಬಂದಿದೆ. ಈಕೆ ಶೋಯಬ್ ಮಲಿಕ್ ಜೊತೆ ಫೋಟೊಶೂಟ್ನಲ್ಲಿ ಭಾಗಿಯಾಗಿದ್ದರು, ಅಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದಿದೆ ಎನ್ನಲಾಗುತ್ತಿದೆ. ಆಯೇಷಾ ಓಮರ್ ಜೊತೆ ಶೋಯಬ್ ಮಲಿಕ್ 2ನೇ ಮದುವೆ ಮನಸ್ಸು ಮಾಡಿದ್ದಾರಂತೆ ಎಂದೂ ಹೇಳಲಾಗುತ್ತಿದೆ.
ಅಂದಹಾಗೆ, ಲಾಹೋರ್ನಲ್ಲಿ ಹುಟ್ಟಿಬೆಳೆದ ಆಯೇಷಾ ಓಮರ್ ಮಾಡೆಲ್ ಆಗಿ ನಟಿಯಾಗಿ ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದಾಳೆ. ಹಲವು ಉರ್ದು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಪಾಕಿಸ್ತಾನ ಕಿರುತೆರೆ ಕಾರ್ಯಕ್ರಮ, ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾಳೆ.