ಇಸ್ಲಾಮಾಬಾದ್: ಪಾಕಿಸ್ತಾನದ ಯುವಕನೊಬ್ಬ ತನ್ನ ಸಹೋದರಿ ಮತ್ತು ಅವಳ ಸ್ನೇಹಿತನನ್ನು ಒಟ್ಟಿಗೆ ಇರುವುದನ್ನು ನೋಡಿ ಆಕ್ರೋಶಗೊಂಡು ಕೊಲೆ ಮಾಡಿದ್ದಾನೆ.
ಪಾಕಿಸ್ತಾನದ ತಿರ್ಕ್ರಿವಾಲಾದಲ್ಲಿ ಘಟನೆ ನಡೆದಿದೆ. ಆರೋಪಿ ಮೊದಲು ಸಹೋದರಿಯ ಸ್ನೇಹಿತನ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದು, ಬಳಿಕ ಆಕೆಯನ್ನು ಟೆರೇಸ್ ಗೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಕೊಲೆ ಆರೋಪಿಯನ್ನು ಓಮರ್ ಎಂದು ಗುರುತಿಸಲಾಗಿದೆ. ಮೃತರನ್ನು ಅಶ್ಫಾಕ್ ಮತ್ತು ಮೆಹ್ವಿಶ್ ಎಂದು ಗುರುತಿಸಲಾಗಿದೆ. ಮೊಹಲ್ಲಾ ಘರಿಬಾಬಾದ್ ನಿವಾಸಿ ಮೆಹ್ವಿಶ್ ಭಾನುವಾರ ರಾತ್ರಿ ತನ್ನ ಸ್ನೇಹಿತ ಅಶ್ಫಾಕ್ ನನ್ನ ಮನೆಗೆ ಕರೆಸಿಕೊಂಡಿದ್ದಳು. ತನ್ನ ಮನೆಯಲ್ಲಿ ಅವರು ಒಟ್ಟಿಗೆ ಇರುವುದನ್ನು ನೋಡಿದಾಗ ಒಮರ್ ಕೊಲೆ ಮಾಡಿದ್ದಾನೆ.
ಮುಂಜಾನೆ 2.45ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಫ್ಯಾಕ್ಟರಿ ಏರಿಯಾ ಡಿಎಸ್ಪಿ ಮಲಿಕ್ ತಾರೀಖ್ ಮತ್ತು ಠಾಣಾಧಿಕಾರಿ ಮಿಯಾನ್ ಅಸ್ಗರ್ ಪೊಲೀಸರೊಂದಿಗೆ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಮೃತವ್ಯಕ್ತಿಯ ಕುಟುಂಬ ಹೇಳಿರುವಂತೆ ಅವರು ಅಸಭ್ಯವಾಗಿ ಕಂಡುಬಂದಿದ್ದರು ಎಂದು ಹೇಳಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಯುವತಿಯ ಸಂಬಂಧಿಕರು ಸೇರಿ ಕೊಲೆ ಮಾಡಿದ್ದಾರೆ. ಅಶ್ಫಾಕ್ ಅವರ ಕುಟುಂಬವೂ ಒಮರ್ ನನ್ನು ಕೊಂದಿದೆ ಎಂದು ಆರೋಪಿಸಲಾಗಿದೆ. ಅದಕ್ಕಿಂತ ಮೊದಲು ಅಶ್ಫಾಕ್ ಮತ್ತು ಮೆಹ್ವಿಶ್ ಇಬ್ಬರನ್ನೂ ಒಮರ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.