ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಗನ ಆರೋಗ್ಯದಲ್ಲಿ ಏರುಪೇರಾಗಿದೆ. ಸಾನಿಯಾ ಮಿರ್ಜಾ ಪತಿ ಹಾಗೂ ಪಾಕ್ ಹಿರಿಯ ಕ್ರಿಕೆಟರ್ ಶೋಯೆಬ್ ಮಲಿಕ್ ಈ ಸಂದರ್ಭದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಿಂದ ಶೋಯೆಬ್ ಮಲಿಕ್ ಹೊರಗುಳಿದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಮಾಹಿತಿ ನೀಡಿದೆ. ಶೋಯೆಬ್ ಮಲಿಕ್ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೈ ಹಿಡಿದಿದ್ದು, ದಂಪತಿಗೆ ಮೂರು ವರ್ಷದ ಮಗನಿದ್ದಾನೆ. ಮಗ ಇಝಾನ್ ಆರೋಗ್ಯದಲ್ಲಿ ಏರುಪೇರಾಗಿದೆ. ಮಗುವಿನ ಅನಾರೋಗ್ಯದ ಕಾರಣ ಶೋಯೆಬ್ ಮಲಿಕ್ ಸೋಮವಾರ ಬಾಂಗ್ಲಾದೇಶ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯವನ್ನು ಆಡ್ತಿಲ್ಲವೆಂದು ಪಿಸಿಬಿ ಹೇಳಿದೆ. ಪಂದ್ಯಕ್ಕೂ ಮುನ್ನ ಶೋಯೆಬ್ ಮಲ್ಲಿಕ್ ದುಬೈಗೆ ತೆರಳಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮಧ್ಯೆ ಎರಡು ಪಂದ್ಯ ನಡೆಯಲಿದೆ. ಈ ಸರಣಿಯ ಮೊದಲ ಟೆಸ್ಟ್ ಚಿತ್ತಗಾಂಗ್‌ನಲ್ಲಿ ಶುಕ್ರವಾರ ಶುರುವಾಗಲಿದೆ. ಎರಡನೇ ಟೆಸ್ಟ್ ಢಾಕಾದಲ್ಲಿ ಡಿಸೆಂಬರ್ 4ರಂದು ನಡೆಯಲಿದೆ. ಟಿ-20 ತಂಡದ ಆಟಗಾರರು ದುಬೈ ಮೂಲಕ ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಮಂಗಳವಾರ ಆಟಗಾರರು ದುಬೈಗೆ ಪ್ರಯಾಣ ಬೆಳೆಸಲಿದ್ದು, ಶೋಯೆಬ್ ದುಬೈನಲ್ಲಿ ತಂಡ ಸೇರುವ ಸಾಧ್ಯತೆಯಿದೆ.