
ಸ್ಟ್ರಾಬೆರಿ, ಕೂಲ್ ಡ್ರಿಂಕ್ಸ್ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ದೋಚಿದ್ದಾರೆ. ವಸ್ತುಗಳನ್ನು ಕದ್ದು ತೆಗೆದುಕೊಂಡು ಹೋಗ್ತಿರೋ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
ಪ್ರತಿಭಟನಾಕಾರರು ಲಾಹೋರ್ ಕಾರ್ಪ್ಸ್ ಕಮಾಂಡರ್ ಮನೆಗೆ ಬೆಂಕಿ ಹಚ್ಚಿದ್ದು ವೀಡಿಯೊ ಚಿತ್ರೀಕರಿಸಲಾಗಿದೆ. ಕೆಲವರು ಸೇನಾ ಕಚೇರಿ ಲೂಟಿ ಮಾಡಿದ್ದಾರೆ ಮತ್ತು ಅವರ ಅಡುಗೆ ಮನೆಯಿಂದ ವಸ್ತುಗಳನ್ನು ತೆಗೆದುಕೊಂಡಿದ್ದಾರೆ ಎಂದು ಕ್ಯಾಮರಾ ದೃಶ್ಯದಲ್ಲಿ ವರದಿ ಮಾಡಲಾಗಿದೆ.
ಸ್ಟ್ರಾಬೆರಿಯಿಂದ ಹಿಡಿದು ಬೇಯಿಸಿದ ಕೂರ್ಮದವರೆಗೆ ಸಾರ್ವಜನಿಕರು ಕದ್ದ ವಸ್ತುಗಳನ್ನು ಬಹಿರಂಗವಾಗಿಯೇ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂತು.
ಪಾಕಿಸ್ತಾನದ ಪತ್ರಕರ್ತರೊಬ್ಬರು ಹಂಚಿಕೊಂಡ ಮತ್ತೊಂದು ವೀಡಿಯೊದಲ್ಲಿ, ಜನರು ಕದ್ದ ಸ್ಟ್ರಾಬೆರಿಗಳನ್ನು ಆನಂದಿಸುತ್ತಿರುವುದು ಕಂಡುಬಂದಿದೆ. ಪಾಕಿಸ್ತಾನ ಸೇನೆಯ ಲಾಹೋರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸಲ್ಮಾನ್ ಫಯಾಜ್ ಘನ್ನಿ ಅವರ ನಿವಾಸದಿಂದ ಈ ಘಟನೆ ನಡೆದಿದೆ ಎಂದು ವಿಡಿಯೋದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (ಎನ್‌ಎಬಿ) ವಾರಂಟ್‌ನ ಮೇಲೆ ಬಂಧಿಸಿದ್ದಾರೆ. ಅವರ ಬಂಧನದ ನಂತರ ಪಿಟಿಐ ಕಾರ್ಯಕರ್ತರು ಕರಾಚಿ, ಲಾಹೋರ್ ಮತ್ತು ಪೇಶಾವರ್ ಸೇರಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದರು.