ನೇರ ಪ್ರಸಾರದ ಸಮಯದಲ್ಲಿ ಪಾಕಿಸ್ತಾನಿ ವರದಿಗಾರರು ಮತ್ತು ಆ್ಯಂಕರ್ಗಳು ಎಡವಟ್ಟು ಮಾಡಿಕೊಂಡಿರುವ ಕೆಲವು ಉದಾಹರಣೆಗಳು ಇವೆ. ಇತ್ತೀಚಿನ ನೇರ ಪ್ರಸಾರದ ಸಮಯದಲ್ಲಿ ಇಬ್ಬರು ಪಾಕಿಸ್ತಾನಿ ಆ್ಯಂಕರ್ಸ್ ಬಾಲಿವುಡ್ ತಾರೆ ಸುನೀಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಮತ್ತು ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಅವರ ವಿವಾಹದ ಬಗ್ಗೆ ಮಾತನಾಡಿದ್ದು ಅದೀಗ ವೈರಲ್ ಆಗಿದೆ.
ನವವಿವಾಹಿತರು ಸ್ವೀಕರಿಸಿದ ಉಡುಗೊರೆಗಳ ಬಗ್ಗೆ ಅವರು ಮಾತನಾಡಿಕೊಂಡಿದ್ದಾರೆ. ಮಹಿಳಾ ಆಂಕರ್ ಉಡುಗೊರೆಗಳನ್ನು ಪಟ್ಟಿ ಮಾಡಲು ಪ್ರಾರಂಭಿಸುವ ಮೊದಲು ಪಟ್ಟಿಯನ್ನು ಗಟ್ಟಿಯಾಗಿ ಓದಲು ತನ್ನ ಸಹ-ಆ್ಯಂಕರ್ಗೆ ಕೇಳುತ್ತಾಳೆ. ವಧುವಿನ ತಂದೆ ಸುನೀಲ್ ಶೆಟ್ಟಿ ದಂಪತಿಗೆ 5 ಕೋಟಿ ರೂಪಾಯಿಯ ಅಪಾರ್ಟ್‌ಮೆಂಟ್ ಅನ್ನು ಮದುವೆಯ ಉಡುಗೊರೆಯಾಗಿ ನೀಡಿರುವ ಬಗ್ಗೆ ಹೇಳಲಾಗುತ್ತದೆ. ನಂತರ ಸಹೋದ್ಯೋಗಿಯು ಅದು 5 ಅಲ್ಲ 50, 5 ಕೋಟಿಯಲ್ಲಿ ಕರಾಚಿಯಲ್ಲಿಯೂ ಬಂಗಲೆ ಬರುವುದಿಲ್ಲ ಎನ್ನುತ್ತಾಳೆ.
ನಂತರ ಚರ್ಚೆ ಸಲ್ಮಾನ್ ಖಾನ್ ಅವರ ಉಡುಗೊರೆಯತ್ತ ಹೋಗುತ್ತದೆ. ಸಲ್ಮಾನ್ ಖಾನ್ ಎಂದಿಗೂ ಮದುವೆಯಾಗುವುದಿಲ್ಲ, ಆದ್ದರಿಂದ ಉಡುಗೊರೆ ಎಂದಿಗೂ ಪಡೆಯುವುದಿಲ್ಲ ಎಂದು ಆ್ಯಂಕರ್ ಹೇಳುತ್ತಾರೆ. ನಂತರ ಜಾಕಿ ಶ್ರಾಫ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ಅರ್ಜುನ್ ಕಪೂರ್ ಅವರ ಉಡುಗೊರೆಗಳ ಬಗ್ಗೆ ಚರ್ಚಿಸಿದರು.
ಈ ಚರ್ಚೆ ಈಗ ಭಾರತದಲ್ಲಿ ಭಾರಿ ಟ್ರೋಲ್ ಆಗುತ್ತಿದೆ. ಮೊದಲೇ ಪಾಕಿಸ್ತಾನದ ಪರಿಸ್ಥಿತಿ ಸರಿಯಿಲ್ಲ. ಈ ಉಡುಗೊರೆಯ ಮೌಲ್ಯ ಲೆಕ್ಕ ಹಾಕುತ್ತಿರುವ ಆ್ಯಂಕರ್ಗಳು ಪಾಕಿಸ್ತಾನದ ಸ್ಥಿತಿ ಸರಿ ಮಾಡಬಹುದಿತ್ತಲ್ಲಾ ಎಂದು ಯೋಚಿಸುವಂತಿದೆ ಎಂದಿದ್ದರೆ, ಇನ್ನೋರ್ವ ಈ ಉಡುಗೊರೆಯ ಮೊತ್ತ ಲೆಕ್ಕ ಹಾಕಿದರೆ ಪಾಕಿಸ್ತಾನದ ಸಂಪೂರ್ಣ ಜಿಡಿಪಿ ಆಗಬಲ್ಲುದು ಎಂದಿದ್ದಾರೆ.