ನವದೆಹಲಿ: ಪಾಕಿಸ್ತಾನಕ್ಕೆ ಭಾರತದಲ್ಲಿ ಉತ್ಪಾದಿಸಲಾದ ಕೋವಿಡ್ ಲಸಿಕೆಯನ್ನು ರವಾನೆ ಮಾಡಲಾಗುವುದು. ಲಸಿಕೆಯನ್ನು ಉಚಿತವಾಗಿ ಪಾಕ್ ಗೆ ನೀಡಲಾಗುತ್ತದೆ.
ಆಸ್ಟ್ರಾಜೆನಿಕಾ, ಆಕ್ಸ್ ಫರ್ಡ್ ವಿವಿ ಸಹಯೋಗದಲ್ಲಿ ಭಾರತದಲ್ಲಿ ಉತ್ಪಾದಿಸಿದ ಬರೋಬ್ಬರಿ 16 ಮಿಲಿಯನ್ ಡೋಸ್ ಲಸಿಕೆಯನ್ನು ಮಾರ್ಚ್ ಮಧ್ಯದಲ್ಲಿ ಪಾಕಿಸ್ತಾನಕ್ಕೆ ಕಳಿಸಲಾಗುವುದು. ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುವ ಲಸಿಕೆಯ ಮೊದಲ ಬ್ಯಾಚ್ ಈ ತಿಂಗಳಲ್ಲಿ ರವಾನಿಸಲಾಗುತ್ತದೆ. ಜೂನ್ ವೇಳೆಗೆ ಲಸಿಕೆ ಇತರೆ ಬ್ಯಾಚ್ ಕಳಿಸಲಾಗುವುದೆಂದು ಪಬ್ಲಿಕ್ ಅಕೌಂಟ್ಸ್ ಕಮಿಟಿಯಿಂದ ಮಾಹಿತಿ ನೀಡಲಾಗಿದೆ.