
194 ರನ್ಗಳನ್ನು ಬೆನ್ನಟ್ಟಿದ ಪಾಕಿಸ್ತಾನ ಕೇವಲ 39.3 ಓವರ್ಗಳಲ್ಲಿ ಇಮಾಮ್-ಉಲ್-ಹಕ್ 78 ರನ್ ಗಳಿಸಿದರೆ, ಮೊಹಮ್ಮದ್ ರಿಜ್ವಾನ್ ಅಜೇಯ 64 ರನ್ ಗಳಿಸಿದರು. ಇದಕ್ಕೂ ಮೊದಲು ಹ್ಯಾರಿಸ್ ರೌಫ್ 3 ವಿಕೆಟ್ ಮತ್ತು ನಸೀಮ್ ಶಾ ಎರಡು ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶವನ್ನು 193 ರನ್ಗಳಿಗೆ ಆಲೌಟ್ ಮಾಡಿದರು. ದೊಡ್ಡ ಗೆಲುವನ್ನು ದಾಖಲಿಸಿದ್ದರೂ, ಪಂದ್ಯದ ವೇಳೆ ತಮ್ಮ ಸ್ಟಾರ್ ವೇಗಿ ನಸೀಮ್ ಶಾ ಗಾಯಗೊಂಡಿದ್ದು ಪಾಕಿಸ್ತಾನದ ಆತಂಕಕ್ಕೆ ಕಾರಣವಾಗಿದೆ.
ಬುಧವಾರ ಇಲ್ಲಿ ನಡೆದ ಏಷ್ಯಾಕಪ್ನ ಪಾಕಿಸ್ತಾನದ ಸೂಪರ್-ಫೋರ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು ಗಾಯಗೊಂಡ್ರು. ವೇಗಿ ಶಾಹೀನ್ ಅಫ್ರಿದಿ ಬಾಂಗ್ಲಾದ ಮೊಹಮ್ಮದ್ ನಯಿಮ್ ಅನ್ನು ಬೌಲ್ಡ್ ಮಾಡಿದ್ರು. ಅವರು ಚೆಂಡನ್ನು ಫೈನ್ ಲೆಗ್ಗೆ ಫ್ಲಿಕ್ ಮಾಡಿದ್ರು. ಚೆಂಡನ್ನು ನಿಲ್ಲಿಸಲು ನಸೀಮ್ ತನ್ನ ಎಡಕ್ಕೆ ಡೈವ್ ಹೊಡೆದು ಬಿದ್ದಿದ್ದಾರೆ. ಈ ವೇಳೆ ನೋವಿನಿಂದ ಬಳಲಿದ ಅವರನ್ನು ತಕ್ಷಣ ಮೈದಾನದಿಂದಾಚೆ ಕರೆದೊಯ್ಯಲಾಯಿತು.
ಭಾನುವಾರ ಭಾರತದ ವಿರುದ್ಧ ನಡೆಯಲಿರುವ ಪಂದ್ಯಕ್ಕೂ ಮುನ್ನ ಸ್ಟಾರ್ ವೇಗಿ ಗಾಯಗೊಂಡಿರುವುದು ಪಾಕ್ ತಂಡದ ಕಳವಳಕ್ಕೆ ಕಾರಣವಾಗಿದೆ. ಅಲ್ಲದೆ, ಮುಂದಿನ ತಿಂಗಳು ಭಾರತದಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ನಡೆಯಲಿರುವುದರಿಂದ, ನಸೀಮ್ ಗಾಯಗೊಂಡಿರುವುದು ಪಾಕಿಸ್ತಾನದ ಚಿಂತೆಗೆ ಕಾರಣವಾಗಿದೆ.