ಲಾಹೋರ್: ಪಾಕಿಸ್ತಾನದ ಲಾಹೋರ್‌ನ ಡಿಫೆನ್ಸ್ ಹೌಸಿಂಗ್ ಅಥಾರಿಟಿ (ಡಿಎಚ್‌ಎ) ಪ್ರದೇಶದಲ್ಲಿರುವ ಇಂಟರ್‌ನ್ಯಾಷನಲ್ ಸ್ಕೂಲ್‌ನಿಂದ ಆಘಾತಕಾರಿ ವಿಡಿಯೋವೊಂದು ಹೊರಬಿದ್ದಿದೆ. ಬಾಲಕಿಯರ ಗುಂಪೊಂದು ಸಹಪಾಠಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.
ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ನಾಲ್ವರು ಬಾಲಕಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಯೋ ಟಿವಿ ವರದಿಯ ಪ್ರಕಾರ, ತಲಾ 50 ಸಾವಿರ ಮೌಲ್ಯದ ಶ್ಯೂರಿಟಿ ಬಾಂಡ್‌ಗಳ ವಿರುದ್ಧ ಸೆಷನ್ಸ್ ನ್ಯಾಯಾಲಯವು ಅವರಿಗೆ ಬಂಧನ ಪೂರ್ವ ಜಾಮೀನು ನೀಡಿದೆ.
ತಮ್ಮ ಸಹಪಾಠಿಯನ್ನು ಥಳಿಸುತ್ತಿರುವುದನ್ನು ಕಂಡ ಹುಡುಗಿಯರು ಆಕೆಯನ್ನು ನೆಲದ ಮೇಲೆ ಕೂರಿಸಿದ್ದಾರೆ ಮತ್ತು ಆಕೆಯ ತಲೆಯನ್ನು ಹಿಡಿದುಕೊಂಡು ಕುಳಿತಿರುವುದು ಕಂಡುಬರುತ್ತದೆ. ಈ ವಿಡಿಯೋವು ಲಾಹೋರ್‌ನ ಡಿಫೆನ್ಸ್‌ನಲ್ಲಿರುವ ಸ್ಕಾರ್ಸ್‌ಡೇಲ್ ಅಮೇರಿಕನ್ ಇಂಟರ್‌ನ್ಯಾಶನಲ್ ಸ್ಕೂಲ್‌ನದ್ದು ಆಗಿದೆ.
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸದಸ್ಯ @MaheenFaisal20 ಶನಿವಾರ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ರೌಡಿ ಹುಡುಗಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಮದ್ಯಪಾನ ಮಾಡಲು ನಿರಾಕರಿಸಿದ್ದಕ್ಕೆ ಸಹಪಾಠಿಗಳು ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಿಟಿಐ ಸದಸ್ಯರು ಆರೋಪಿಸಿದ್ದಾರೆ. ಮಾದಕ ವ್ಯಸನಿಗಳಾಗಿರುವ ದುಷ್ಕರ್ಮಿಗಳ ಸಹವಾಸಕ್ಕೆ ಸೇರಲು ನಿರಾಕರಿಸಿದ್ದರಿಂದ ಮಗಳನ್ನು ಥಳಿಸಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ತಂದೆ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.